ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ ನೀಡುವ ಕುರಿತು ಇನ್ನು 2 -3 ದಿನದಲ್ಲಿ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ.
ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಪ್ರಗತಿವಾಹಿನಿಗೆ ಈ ಮಾಹಿತಿ ನೀಡಿವೆ. ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಹಾಗಾಗಿ ಶಿಕ್ಷಕರ ಹಕ್ಕಿನ ರಜೆ ನೀಡುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಹಿರಿಯ ಅಧಿಕಾರಿಗಳಿಂದ ಬಂದಿದೆ.
ಕೊರೋನಾದಿಂದಾಗಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದರೂ ಶಿಕ್ಷಕರು ವರ್ಷವಿಡೀ ಕೆಲಸ ಮಾಡಿದ್ದಾರೆ. ಕೊರೋನಾ ಹಾವಳಿ ವಿಪರೀತವಾದ ಸಂದರ್ಭದಲ್ಲೂ ಶಿಕ್ಷಕರು ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಈಗಾಗಲೆ ರಜೆ ನೀಡಿರುವುದರಿಂದ ಶಿಕ್ಷಕರಿಗೆ ಅಂತಹ ಅಗತ್ಯದ ಕೆಲಸಗಳು ಇರುವುದಿಲ್ಲ. ಹಾಗಾಗಿ ಶಿಕ್ಷಕರಿಗೆ ಅವರ ಹಕ್ಕಿನ ಬೇಸಿಗೆ ರಜೆ ನೀಡಬೇಕು ಎಂದು ವಿವಿಧ ಶಿಕ್ಷಕರ ಸಂಘಟನೆಗಳು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿವೆ.
ಹಾಗಾಗಿ ಸೋಮವಾರ ಇಲ್ಲವೆ ಮಂಗಳವಾರ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಶಾಲೆಗಳು ಬಂದ್ : ಇಲ್ಲಿದೆ ಅಧಿಕೃತ ಆದೇಶ
ರಾಜ್ಯಾದ್ಯಂತ ಶಾಲೆಗಳು ಬಂದ್ : ಇಲ್ಲಿದೆ ಅಧಿಕೃತ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ