ಭಾನುವಾರದ ಸ್ಪೆಷಲ್ ಪಲಾವ್

ಬಸಲೆ ಸೊಪ್ಪಿನ ಪಲಾವ್

 ವೆಜ್ ಪಲಾವ್ ಮಾಡುವುದು ನಮಗೆಲ್ಲಾ ತಿಳಿದಿದೆ. ಇಂದು ನಿಮಗೆ ತುಂಬಾ ಅಂದ್ರೆ ತುಂಬಾನೇ ಚನ್ನಾಗಿರುವ ಬಸಲೆ ಸೊಪ್ಪಿನ ಪಲಾವ್ ಮಾಡುವುದನ್ನು ತಿಳಿಸಿ ಕೊಡ್ತೀವಿ.
ಬೇಕಾದ ಸಾಮಗ್ರಿಗಳು:
ಪಲಾವಿನ ಅಕ್ಕಿ 2 ಕಪ್, ಬಸಲೆಸೊಪ್ಪು 25-30 ಎಲೆ, ಹಸಿಮೆಣಸು 2, ಅಚ್ಚಖಾರದ ಪುಡಿ ಅರ್ಧ ಚಮಚ, ಪಲಾವ್ ಪುಡಿ  1 ಚಮಚ, ಲವಂಗ 3-4, ಚಕ್ಕೆ 1 ಇಂಚು, ಹಸಿ ಶುಂಠಿ 1ಇಂಚು, ಜೀರಿಗೆ 1ಚಮಚ, ಬೆಳ್ಳುಳ್ಳಿ 1 ಗಡ್ಡೆ, ಈರುಳ್ಳಿ 1ಗಡ್ಡೆ  ರುಚಿಗೆ ತಕ್ಕಷ್ಟು ಉಪ್ಪು, ವಗ್ಗರಣೆಗೆ ಎಣ್ಣೆ.
ಮಾಡುವ ವಿಧಾನ:
 ಅಕ್ಕಿಯನ್ನು  ತೊಳೆದು, ಒಂದು ಕಪ್ ಗೆ 2ಕಪ್ ನೀರಿನಂತೆ   4 ಕಪ್  ನೀರು ಹಾಕಿ, ನೀರಿನಲ್ಲಿ  20 ನಿಮಿಷ ಕಾಲ ನೆನೆಸಬೇಕು.
ಬಸಲೆ ಸೊಪ್ಪನ್ನು ತೊಳೆದು ಹೆಚ್ಚಿಡ ಬೇಕು.
ಹಸಿಮೆಣಸು, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ,ಚಕ್ಕೆ, ಲವಂಗ ಇವುಗಳನ್ನಾ ಮಿಕ್ಸಿ ಮಾಡಬೇಕು.  ಕುಕ್ಕರ್ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಆದ ನಂತರ   ಪೇಸ್ಟ ಮಾಡಿಟ್ಟ ಶುಂಠಿ ಹಸಿಮೆಣಸಿನ ಮಿಶ್ರಣ, ಪಲಾವ್ ಪುಡಿ, ಮೆಣಸಿನ ಪುಡಿಗಳನ್ನಾ ಹಾಕಿ ಹಸಿ ವಾಸನೆ ಹೊಗುವವರೆಗೆ ಹುರಿಯಬೇಕು. ಇದಕ್ಕೆ ಹೆಚ್ಚಿಟ್ಟ ಬಸಲೆ ಸೊಪ್ಪು ಹಾಕಿ, ನಂತರ ನೆನೆಸಿದ ಅಕ್ಕಿಯನ್ನು ನೀರು ಸಹಿತಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕುಕ್ಕರ್ ನಲ್ಲಿ ಎರಡು ಸೀಟಿ ಹಾಕಿಸಬೇಕು.
ಬಿಸಿ ಬಿಸಿ ಬಸಲೆ ಸೊಪ್ಪಿನ ಪಲಾವ್ ಸವಿಯಲು ರೆಡಿಯಾಗಿದೆ.
(ಅಕ್ಕಿ ನೀರಿನಲ್ಲಿ ನೆನೆಸಿ ಹಾಕುವುದರಿಂದ  ಅನ್ನ ಉದುರು ಉದುರಾಗಿ ಮೃದುವಾಗಿ ಬರುವುದು.)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button