ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಪೀಠವೊಂದು ನಿತ್ಯದ ನಿಗದಿತ ಅವಧಿಗಿಂತ ಒಂದು ತಾಸು ಮೊದಲೇ ನ್ಯಾಯದಾನ ಕಾರ್ಯಕ್ಕೆ ತೊಡಗಿದೆ.
ಸುಪ್ರೀಂ ಕೋರ್ಟ್ ಭಾವೀ ಮುಖ್ಯ ನ್ಯಾಯಮೂರ್ತಿಗಳ ಪಟ್ಟಿಯಲ್ಲಿರುವ ಜಸ್ಟೀಸ್ ಯು.ಯು. ಲಲಿತ್ ಇಂಥದ್ದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸಾಮಾನ್ಯವಾಗಿ ಕೋರ್ಟ್ ಕಲಾಪಗಳು 10.30ಕ್ಕೆ ಆರಂಭವಾಗುತ್ತವೆ. ಆದರೆ ಜಸ್ಟೀಸ್ ಲಲಿತ್ ಇದನ್ನು 9.30ಕ್ಕೆ ಪ್ರಾರಂಭಿಸಿದ್ದಾರೆ.
“ನಮ್ಮ ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗುವುದಾದರೆ ನಾವೇಕೆ 9.30ಕ್ಕೇ ಕಲಾಪ ಆರಂಭಿಸಬಾರದು” ಎಂದು ಅವರು ಪ್ರಶ್ನಿಸಿದ್ದಾರೆ. ನಿತ್ಯ ಒಂದು ತಾಸು ಮೊದಲೇ ಕೆಲಸ ಆರಂಭಿಸುವುದರಿಂದ ಬೇಗ ಕೆಲಸ ಮುಗಿಸಿ ನಾಳೆಯ ಕಾರ್ಯಗಳಿಗೆ ನ್ಯಾಯಾಧೀಶರು ಸಿದ್ಧತೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಶುಕ್ರವಾರದಿಂದಲೇ ಇದನ್ನು ಜಾರಿಗೆ ತಂದಿರುವ ಅವರಿಗೆ ಮೊದಲ ದಿನ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಅವರು ಪೀಠದೆದುರು 9.30ಕ್ಕೇ ಹಾಜರಾದರು. ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್, ಸುಧಾಂಶು ಧುಲಿಯಾ ಅವರು ಯು.ಯು. ಲಲಿತ್ ಅವರೊಂದಿಗೆ ಕಾರ್ಯಾರಂಭಗೊಳಿಸಿದರು.
ಜಲಪಾತ ಕಂಡು “ಸ್ವರ್ಗ ಭೂಮಿ ಒಂದಾಗಿದೆ” ಎಂದು ಉದ್ಗರಿಸಿದ ಕೇಂದ್ರ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ