ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಸುಪ್ರಿಂ ಕೋರ್ಟ್ ಜಾಮೀನು ನೀಡಿದೆ. ಜೊತೆ ಮಹಾರಾಷ್ಟ್ರ ಸರಕಾರವನ್ನು ಹಿಗ್ಗಾಮುಗ್ಗಾ ಝಾಡಿಸಿದೆ.
ಅರ್ನಬ್ ಗೋಸ್ವಾಮಿಯನ್ನು ಕಳೆದ 4ನೇ ತಾರೀಖು ಬಂಧಿಸಲಾಗಿತ್ತು. ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ಪೊಲೀಸರು ಬಂಧಿಸಿದ್ದಾರೆ ಎಂದು ಅರ್ನಬ್ ಆರೋಪಿಸಿದ್ದರು.
ಅರ್ನಬ್ ಗೆ ಮುಂಬೈ ಹೈಕೋರ್ಟ್ ಜಾಮೀನು ನೀಡಿರಲಿಲ್ಲ. ಹಾಗಾಗಿ ಅವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರಿಂ ಕೋರ್ಟ್ ಜಾಮೀನು ನೀಡಿದೆ. ಬುಧವಾರ ರಾತ್ರಿ 8.30ಕ್ಕೆ ಅರ್ನಬ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ವಯಕ್ತಿಕ ದ್ವೇಷದ ಕಾರಣಕ್ಕೆಲ್ಲ ಈ ರೀತಿ ಬಂಧಿಸಿದರೆ ವ್ಯಕ್ತಿಯ ಸ್ವಾತಂತ್ರ್ಯ ಹರಣವಾಗುತ್ತದೆ. ಈ ರೀತಿ ಸ್ವಾತಂತ್ರ್ಯ ಹರಣವಾದರೆ ಸುಪ್ರಿಂ ಕೋರ್ಟ್ ಇದೆ ಎನ್ನುವುದನ್ನು ಸರಕಾರ ನೆನಪಿಟ್ಟುಕೊಳ್ಳಬೇಕು ಎಂದು ಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ತಿವಿದಿದೆ.
ದೂರುದಾರರು ಯಾವುದೇ ರೀತಿಯ ದೂರು ನೀಡಿದರೂ ಅದಕ್ಕೆ ರೀತಿ ನೀತಿ ಇರುತ್ತದೆ. ದೂರು ಕೊಟ್ಟಾಕ್ಷಣ ಅಮಾನವೀಯವಾಗಿ ಬಂಧಿಸುವುದು ಸರಿಯಾದ ಕ್ರಮವಲ್ಲ. ಇಂತಹ ವರ್ತನೆ ಸಹನೀಯವಲ್ಲ ಎಂದೂ ಕೋರ್ಟ್ ಹೇಳಿದೆ.
ಕತ್ತಿ ಬ್ರದರ್ಸ್ ಲಕ್ ಸರಿ ಇದ್ರೆ ಇದೇ ತಿಂಗಳಲ್ಲಿ 2 ಮಹತ್ವದ ಹುದ್ದೆ
ಪತ್ರಕರ್ತ ಅರ್ನಬ್ ಗೋಸ್ವಾಮಿ ಪೊಲೀಸ್ ವಶಕ್ಕೆ
ಅರ್ನಬ್ ಬಂಧನಕ್ಕೆ 2018ರ ತಾಯಿ -ಮಗನ ಆತ್ಮಹತ್ಯೆ ಪ್ರಕರಣ ಕಾರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ