ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನಾಳೆಯ ವಿಶ್ವಾಸಮತ ಯಾಚನೆಯಲ್ಲಿ ಅತೃಪ್ತ ಶಾಸಕರು ಭಾಗವಹಿಸುವುದು ಕಡ್ಡಾಯವಿಲ್ಲ ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದೆ.
ಅತೃಪ್ತ ಶಾಸಕರ ರಾಜಿನಾಮೆ ಕುರಿತು ನಿರ್ದಿಷ್ಟ ಸಮಯದಲ್ಲಿ ನಿರ್ಧಾರ ಮಾಡುವಂತೆ ಸುಪ್ರಿ ಕೋರ್ಟ್ ಆದೇಶ ನೀಡಿದೆ. ಆದರೆ ಆ ನಿರ್ದಿಷ್ಟ ಸಮಯ ಯಾವುದೆಂದು ಹೇಳಿಲ್ಲ.
ಇದರಿಂದಾಗಿ ಅತೃಪ್ತರಿಗೆ ದೊಡ್ಡ ಗೆಲುವು ಸಿಕ್ಕಿದಂತಾಗಿದೆ. ಸರಕಾರ ವಿಶ್ವಾಸಮತ ಕಳೆದುಕೊಳ್ಳುವ ಎಲ್ಲ ಲಕ್ಷಣ ಕಾಣುತ್ತಿದೆ.
ಎರಡೇ ವಾಖ್ಯಗಳಲ್ಲಿ ನ್ಯಾಯಪೀಠ ತೀರ್ಪು ನೀಡಿದೆ. ಕಲಾಪದಲ್ಲಿ ಭಾಗವಹಿಸುವುದು ಶಾಸಕರ ವಿವೇಚನೆಗೆ ಬಿಟ್ಟಿದ್ದು. ಅವರ ಮೇಲೆ ಒತ್ತಡ ಹೇರುವಂತಿಲ್ಲ ಎಂದು ತೀರ್ಪು ಹೇಳಿದೆ.
ನಿನ್ನೆ ಸುಮಾರು 4 ಗಂಟೆಗಳ ಕಾಲ ವಾದವಿವಾದ ನಡೆದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ