Latest

ತುಪ್ಪದ ಬೆಡಗಿಗೆ ತಪ್ಪದ ಸಂಕಷ್ಟ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ತುಪ್ಪದ ಬೆಡಗಿ ಖ್ಯಾತಿಯ ರಾಗಿಣಿ ದ್ವಿವೇದಿ ಸಂಕಷ್ಟ ಇನ್ನೂ ಮುಗಿದಿಲ್ಲ. ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕಾರವಾದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದ ರಾಗಿಣಿ ದ್ವಿವೇದಿಗೆ ಅಲ್ಲೂ ಇನ್ನೂ ಜಾಮೀನು ಮಂಜೂರಾಗಿಲ್ಲ.

ಸುಪ್ರಿಂ ಕೋರ್ಟ್ ಶುಕ್ರವಾರ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಹಾಗಾಗಿ ರಾಗಿಣಿಗೆ ಜೈಲೇ ಗತಿಯಾಗಿದೆ.

Home add -Advt

ಕಳೆದ 4 ತಿಂಗಳುಗಳಿಂದ ( ಸೆಪ್ಟಂಬರ್ 3ರಿಂದ) ರಾಗಿಣಿ ಜೈಲಿನಲ್ಲಿದ್ದಾರೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾಗಿಣಿಯನ್ನು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನಕ್ಕೊಳಲಾಗಿದ್ದ ಸಂಜನಾ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಆದರೆ ರಾಗಿಣಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ.

Related Articles

Back to top button