*ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಕುರಿತ ಸುಪ್ರೀಂ ಕೋರ್ಟಿನ ತೀರ್ಪು ಸ್ವಾಗತಾರ್ಹ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿ ಆರ್ ಪಿಸಿ 125ರ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಪಡೆಯುವ ಹಕ್ಕನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಶ್ಲಾಘನೀಯ ಎಂದು ತಿಳಿಸಿದ್ದಾರೆ.
ಗುರುವಾರ ಪತ್ರಿಕಾ ಪ್ರಕಟಣೆ ಮುಲಕ ತಿಳಿಸಿದ ಅವರು, 1985ರಲ್ಲಿ ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡುವ ಪತಿ, ಜೀವನಾಂಶ ಕೊಡಬೇಕೆಂದು ತೀರ್ಪು ನೀಡಿತ್ತು. ಅದನ್ನು ಮಾಜಿ ಪ್ರಧಾನಿ ದಿವಗಂತ ರಾಜೀವ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರ ಸಂಸತ್ತಿನಲ್ಲಿ ತಡೆ ಒಡ್ಡಿ, ಮುಸ್ಲಿಂ ವೈಯಕ್ತಿಕ ಕಾನೂನಿಗೆ ಬೆಂಬಲ ಕೊಟ್ಟು, ಸುಪ್ರೀಂ ಕೋರ್ಟಿನ ತೀರ್ಪನ್ನು ನಿರಾಕರಿಸಿ ಮುಸ್ಲಿಂ ಮಹಿಳೆಯರನ್ನ ನಿರಾಶ್ರಿತರನ್ನಾಗಿಸಿತ್ತು ಎಂದು ನೆನಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದರು, ಮಹಿಳಾಪರವಾದ ನಿಲುವಿನ ವಿರುದ್ಧ ಇಡೀ ಕಾಂಗ್ರೆಸ್ ಪಕ್ಷ ನಿಂತಿತ್ತು. ಪುನಃ ಇದೀಗ ಅದೇ ಜೀವನಾಂಶದ ವಿಚಾರ ಬಂದಿದ್ದು, ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಯರಿಗೂ ಕೂಡ ಜೀವನಾಂಶ ಕೊಡುವುದನ್ನು ಎತ್ತಿ ಹಿಡಿದಿದೆ ಎಂದು ಸ್ವಾಗತಿಸಿದ್ದಾರೆ.
ಭಾರತದ ಸಂವಿಧಾನದ ಕುರಿತು ಪದೇಪದೇ ಮಾತನಾಡುವ, ಡೋಂಗಿ ಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷದವರು ಮಹಿಳಾಪರವಾಗಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಪ್ರಕರಣದಲ್ಲಿ ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಹೇಗೆ ನಡೆದುಕೊಳ್ಳಲಿದ್ದಾರೆ? ಅವರ ತಂದೆ ಮಾಡಿದ್ದನ್ನು ಬೆಂಬಲಿಸುವರೇ ಅಥವಾ ಸುಪ್ರೀಂ ಕೋರ್ಟ್ ನಿಲುವನ್ನು ಗೌರವಿಸುವರೇ? ಎಂದು ಪ್ರಶ್ನಿಸಿದ್ದಾರೆ.
1985ರಲ್ಲಿ ಕಾಂಗ್ರೆಸ್ಸಿಗೆ ಬಹುಮತ ಇದ್ದಾಗ ಮುಸ್ಲಿಂ ಮಹಿಳೆಯರ ನ್ಯಾಯವನ್ನು, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಘನತೆಯನ್ನು ಗಾಳಿಗೆ ತೂರಿದ ಕಾಂಗ್ರೆಸ್ ಇವತ್ತು ಅಧಿಕಾರದಲ್ಲಿ ಇಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಇವತ್ತು ಆಡಳಿತ ನಡೆಸುತ್ತಿದೆ. ಯಾವ ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ ಮೋದಿಜೀ ಸರಕಾರವು, ಇಂದು ಮುಸ್ಲಿಂ ಮಹಿಳೆಯರ ಪರವಾಗಿ ಕೂಡ ನಿಲ್ಲಲಿದೆ. ಭಾರತದಲ್ಲಿ ಹಿಂದೂ ಮಹಿಳೆಯರಂತೆ ಮುಸ್ಲಿಂ ಮಹಿಳೆಯರು ಮೋದಿಜೀ ಅವರ ಸರಕಾರದಲ್ಲಿ ಸ್ವಾಭಿಮಾನದಿಂದ ಸುರಕ್ಷಿತರಾಗಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ