ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಚ್ಛೇಧನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿ-ಪತ್ನಿ ಇಬ್ಬರಿಗೂ ಪರಸ್ಪರ ಒಪ್ಪಿಗೆ ಇದ್ದರೆ ವಿಚ್ಛೇಧನಕ್ಕೆ ಆದೇಶ ನೀಡಬಹುದು. 6 ತಿಂಗಳ ಕಾಲ ಕಾಯುವ ಅಗತ್ಯವಿಲ್ಲ ಎಂದು ತಿಳಿಸಿದೆ.
ವಿಚ್ಛೇದನ ಪಡೆಯಲು ಮುಂದಾದ ದಂಪತಿ ಕಾನೂನು ಪ್ರಕಾರ 6 ತಿಂಗಳು ಕಾಯಬೇಕು ಎಂಬ ನಿಯಮವಿತ್ತು. ಆದರೆ ಇನ್ಮುಂದೆ 6 ತಿಂಗಳ ಸಮಯಾವಕಾಶ ತೆಗೆದುಕೊಳ್ಳಬೇಕಿಲ್ಲ. ಪತಿ-ಪತ್ನಿ ಇಬ್ಬರಿಗೂ ಹೊಂದಾಣಿಕೆ ಅಸಾಧ್ಯ, ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲ ಎಂದು ಹೇಳಿದರೆ ಕಾನೂನು ಪ್ರಕಾರ ವಿಚ್ಛೇದನ ನೀಡಬಹುದು.
ಸುಪ್ರೀಂ ಪರಿಚ್ಛೇದ 142ರ ಅಡಿಯಲ್ಲಿ ಅಧಿಕಾರವನ್ನು ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎ ಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ.ಕೆ.ಮಹೇಶ್ವರಿ ಅವರನ್ನೊಳಗೊಂದ ಸಂವಿಧಾನ ಪೀಠ ಈ ಅಭಿಪ್ರಾಯಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ