
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನಿನ್ನೆ ಅಕಾಲಿಕ ನಿಧನಹೊಂದಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಂತ್ಯ ಸಂಸ್ಕಾರ ನವದೆಹಲಿಯಲ್ಲಿ ಇಂದು ಸಂಜೆ ನಡೆಯಿತು.
ಕೋವಿಡ್ -19ರ ನಿಯಮಾವಳಿ ಅನ್ವಯ ಅಂಗಡಿಯವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಸುರೇಶ ಅಂಗಡಿ ಕುಟುಂಬಸ್ಥರು, ಕೇಂದ್ರದ ಕೆಲವು ಸಚಿವರು, ರಾಜ್ಯ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಮುಖ್ಯಮಂತ್ರಿ, ಸಚಿವ ಜಗದೀಶ ಶೆಟ್ಟರ್, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ್, ಬಿಜೆಪಿ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ್, ದಿಗ್ವಿಜಯ್ ಸಿದ್ನಾಳ ಮೊದಲಾದವರು ಅಂತಿಮ ಸಂಸ್ಕಾರದ ವೇಳೆ ಹಾಜರಿದ್ದರು.
ಸುರೇಶ ಅಂಗಡಿಯವರನ್ನು ಮಣ್ಣಿನಲ್ಲಿ ಹಾಕುತ್ತಿದ್ದಂತೆ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ