*ಸರ್ಕಾರದ ವಿರುದ್ಧ ಸಿಡಿದೆದ್ದ ಭೂಮಾಪಕರು; ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪರವಾನಗಿ ಪಡೆದ ರಾಜ್ಯ ಭೂಮಾಪಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ನಗರದ ಚನ್ಮಮ್ಮ ವೃತ್ತದಲ್ಲಿ ಪರವಾನಿಗೆ ಭೂಮಾಪಕರ ಖಾಯಂ ಮಾಡಿಕೊಳ್ಳುವಂತೆ ಆಗ್ರಹಿಸಿ ಬೃಹತ್ ಪ್ರತಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘಟನೆ, ಹಸಿರು ಸೇನೆಯ ಮುಖಂಡರಾದ ಚುನಪ್ಪ ಪೂಜಾರಿ, ಶಶಿಕಾಂಕತ ಗುರುಜಿ ಸಾಥ್ ನೀಡಿದರು.
ಪ್ರತಿಭಟನೆಯಲ್ಲಿ ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ಸಾವಿರಾರು ಭೂಮಾಪಕರು ಭಾಗಿಯಾಗಿದ್ದು, ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಸರ್ಕಾರಿ ಭೂಮಾಪಕರಷ್ಟೇ ಕೆಲಸವನ್ನು ಪರವಾನಗಿ ಭೂಮಾಪಕರ ಮಾಡುತ್ತಾರೆ. ಸಮಾನ ಕೆಲಸಕ್ಕೆ ಸರ್ಕಾರ ಸಮಾನ ವೇತನ ನೀಡಬೇಕಿತ್ತು ಅದರ ಬದಲು ಸರ್ಕಾರ ಪರವಾನಗಿ ಭೂಮಾಪಕರನ್ನು ಜೀತರನ್ನಾಗಿ ದುಡಿಸಿಕೊಳ್ಳುತ್ತಿದೆ. ಸರ್ಕಾರ ಹೇಳುವ ಎಲ್ಲ ಕೆಲಸಗಳನ್ನು ನಾವು ನೀಟಾಗಿ ಮಾಡುತ್ತೇವೆ.ಆದರೆ ಸರ್ಕಾರ ಮಾತ್ರ ವೇತನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಸರ್ಕಾರಿ ಭೂಮಾಪಕರಿಗೆ 52 ಸಾವಿರ ವೇತನ ಇದೆ, ಪರವಾನಿಗೆ ಭೂಮಾಪಕರಿಗೆ 12 ಸಾವಿರ ಸಂಭಾಷಣೆ ಇದೆ. ದುಬಾರಿ ದುನಿಯಾದಲ್ಲಿ ಈ ಹಣದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ತಕ್ಷಣವೇ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದರೆ ಬೆಂಗಳೂರಲ್ಲಿ ಬೃಹತ್ ಹೋರಾಟ ನಡೆಸುವ ಮೂಲಕ ಹಕ್ಕು ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.



