Kannada NewsNational

*ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಸೂರ್ಯಕಾಂತ್ ಪ್ರಮಾಣವಚನ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ: ಸುಪ್ರೀಂ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ಸೂರ್ಯಕಾಂತ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೂರ್ಯಕಾಂತ್ ಅವರು 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಂತರ ಈ ಹುದ್ದೆ ಅಲಂಕರಿಸಿದ್ದ ಸಿಜೆಐ ಗವಾಯಿ ನವೆಂಬರ್ 23 ರಂದು ನಿವೃತ್ತರಾಗಿದ್ದಾರೆ. ಈ ಹಿನ್ನಲೆ ನ್ಯಾಯಮೂರ್ತಿ ಸುರ್ಯಕಾಂತ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದೀಗ ಇಂದು ಹಿರಿತನದ ನಿಯಮಾನುಸಾರ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಸುಮಾರು 15 ತಿಂಗಳುಗಳ ಕಾಲ ಅವರು ಈ ಹುದ್ದೆಯನ್ನು ಅಲಂಕರಿಸಲಿದ್ದು 2027ರ ಫೆಬ್ರವರಿ 9 ರಂದು ಅವರು ನಿವೃತ್ತಿಯಾಗಲಿದ್ದಾರೆ.

Home add -Advt

Related Articles

Back to top button