Belagavi NewsBelgaum NewsCrimeKannada NewsKarnataka NewsNational

*ಮನೆಗೆ ನುಗ್ಗಿ ಹಣ ದೋಚಿದ ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಗೆ ರಾತ್ರಿ ವೇಳೆ ನುಗ್ಗಿ ಲಕ್ಷಾಂತರ ರೂಪಾಯಿ ಕದ್ದು ಪರಾರಿಯಾಗಿದ್ದ ದರೋಡೆಕೊರರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಸವರಾಜ ರಾಮಣ್ಣ ಬಡಿಗೇರ (42) ಎಂಬುವರನ್ನು ಬಂಧಿಸಿ ಕಳ್ಳತನವಾಗಿದ್ದ 6,90,000 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಿದ್ದಲಿಂಗಪ್ಪ ಸಣ್ಣಭೀಮಪ್ಪ ತಪಸಿ ಎಂಬುವರು ತಮ್ಮ ಮನೆಯಲ್ಲಿ 6,90,000 ರೂಪಾಯಿ ಹಣವನ್ನು ಕಳ್ಳತನ ಅಗಿರುವ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.‌ ದೂರು ಆದರಿಸಿ ತನಿಖೆ ನಡೆಸಿದ ಗೋಕಾಕ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

ಸದರ ಪ್ರಕರಣದಲ್ಲಿ ಕಳ್ಳನಿಗೆ ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಸುರೇಶಬಾಬು ಆರ್.ಬಿ, ಪಿಎಸ್ಐ ಕೆ ಬಿ ವಾಲಿಕಾರ, ಪಿಎಸ್‌ಐ ಎಲ್ ಎಲ್ ಪತ್ತೆನ್ನವರ, ಮತ್ತು ಸಿಬ್ಬಂದಿ ಬಿ ವಿ ನೆರ್ಲಿ, ಎಮ್ ಎಲ್ ಮಣ್ಣಿಕೇರಿ, ಕುಮಾರ ಎಚ್ ಪವಾರ, ಮಾರುತಿ ವಾಯ್ ಪಡದಲ್ಲಿ, ವಿ ಎಸ್ ಮಲಾಮರ್ಡಿ, ಡಿ ಜಿ ಕೊಣ್ಣೂರ, ಡಿ ಬಿ ಅಂತರಗಟ್ಟಿ, ಎಚ್ ಡಿ ಗೌಡಿ, ವಿ ಎಲ್ ನಾಯ್ಕವಾಡಿ, ವಿಠಲ ಖೋತ್, ಸಂತೋಷ ವಜ್ರಮಟ್ಟಿ, ಎಮ್ ಎನ್ ಪರಮಶೆಟ್ಟಿ, ಹಣಮಂತ ಮಲ್ಲಾಡದವರ, ಜೆ ಎಮ್ ನಾಗನೂರ, ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ವಿನೋದ ತಕ್ಕನ್ನವರ ಮತ್ತು ಸಚಿನ ಪಾಟೀಲ ಇವರ ಕಾರ್ಯವನ್ನು ಎಸ್.ಪಿ ಕೆ ರಾಮರಾಜನ ಅವರು ಶ್ಲಾಘಿಸಿದ್ದಾರೆ.

Home add -Advt

Related Articles

Back to top button