Latest

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣವನ್ನೇ ಅಡವಿಟ್ಟ ಸರ್ಕಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾರಿಗೆ ಸಿಬ್ಬಂದಿಗಳ ವೇತನ, ಇಲಾಖೆಯ ಖುರ್ಚುವೆಚ್ಚ ನಿರ್ವಹಿಸಲು ರಾಜ್ಯ ಸರ್ಕಾರ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣವನ್ನೆ ಕೆನರಾ ಬ್ಯಾಂಕ್ ಗೆ ಅಡವಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಆನಂದ್ ಎಂಬುವವರು ಪಡೆದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಶಾಂತಿನಗರ ಬಸ್ ನಿಲ್ದಾಣವನ್ನು ಕೆನರಾ ಬ್ಯಾಂಕ್ ಗೆ ಅಡವಿಟ್ಟು 160 ಕೋಟಿ ಸಾಲ ಪಡೆದುಕೊಂಡಿದೆ. ಇದಕ್ಕಾಗಿ ಪ್ರತಿ ತಿಂಗಳು ಬರೋಬ್ಬರಿ 1.04 ಕೋಟಿ ಬಡ್ಡಿ ಕಟ್ಟುತ್ತಿದೆ.

ಆನಂದ್ ಎಂಬುವವರು 2019ರ ಅಕ್ಟೋಬರ್ ನಿಂದ 2021ರ ಜನವರಿವರೆಗೆ ಬಿಎಂಟಿಸಿ ಸಂಸ್ಥೆ ಎಷ್ಟು ಸಾಲ ಮಾಡಿದೆ? ಅದಕ್ಕೆ ಎಷ್ಟು ಬಡ್ಡಿ ಕಟ್ಟುತ್ತಿದೆ?  ಸಾಲಕ್ಕೆ ಅಡಮಾನ ಇಟ್ಟಿರುವ ಆಸ್ತಿ ಯಾವುದು ಎಂಬ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಾರಿಗೆ ಇಲಾಖೆ ಅಕೌಂಟ್ ಸೆಕ್ಷನ್ ನಿಂದ ಮಾಹಿತಿ ನೀಡಲಾಗಿದ್ದು, ಈ ಅವಧಿಯಲ್ಲಿ 160 ಕೋಟಿ ಸಾಲವನ್ನು ಕೆನರಾ ಬ್ಯಾಂಕ್ ನಿಂದ ಪಡೆಯಲಾಗಿದೆ. ಇದಕ್ಕಾಗಿ ಶಾಂತಿ ನಗರ ಬಸ್ ನಿಲ್ದಾಣವನ್ನು ಅಡಮಾನ ಇಡಲಾಗಿದೆ ಎಂದು ತಿಳಿದುಬಂದಿದೆ.

Home add -Advt

Related Articles

Back to top button