Kannada NewsKarnataka NewsLatest

ಉಡುಪಿ ಪೇಜಾವರ ಮಠದ ಸ್ವಾಮೀಜಿ ಬುಧವಾರ ಬೆಳಗಾವಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಅಂಗವಾಗಿ ಗುರುಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜ.೨೦ ರಂದು ಸಂಜೆ ೫ ಗಂಟೆಗೆ ಬೆಳಗಾವಿಗೆ ಆಗಮಸಿಲಿದ್ದಾರೆ. ಬುಧವಾರ ಸಾಯಂಕಾಲ ೬ ಗಂಟೆಗೆ ಕುಂಭ ಸ್ವಾಗತ, ತದನಂತರ ವಿದ್ವಾಂಸರಿಂದ ಪ್ರವಚನ ನಡೆಯುವುದು.
ದಿನಾಂಕ ೨೧/೧/೨೦೨೧ : ಬೆಳಿಗ್ಗೆ ೧೧ ಗಂಟೆಗೆ ಸಂಸ್ಥಾನ ಪೂಜೆ ಮತ್ತು ಪ್ರಸಾದ.
ಸಾಯಂಕಾಲ ೬ ಗಂಟೆಗೆ ರಾಘೋತ್ತಮ ಆಚಾರ್ಯ ನಾಗಸಂಪಿಗೆ, ಬಾಗಲಕೋಟೆಯವರಿಂದ ಪ್ರವಚನ.
ಸಾಯಂಕಾಲ ೭ ಗಂಟೆಗೆ ದಾಸವಾಣಿ ಉದಯ ದೇಶಪಾಂಡೆ ಮತ್ತು ಸಂಗಡಿಗರಿಂದ.
ರಾತ್ರಿ ೮ ಗಂಟೆಗೆ ಕೃಷ್ಣನ ತೊಟ್ಟಿಲು ಪೂಜೆ.
ದಿನಾಂಕ : ೨೨/೦೧/೨೦೨೧ರ ಬೆಳಿಗ್ಗೆ ೧೧ ಗಂಟೆಗೆ ಸೌರ ಮಧ್ವನವಮಿ- ಮಧ್ವವಿಜಯ ಪಾರಾಯಣ-ಪ್ರಸಾದ.
ಎಲ್ಲಾ ಕಾರ್ಯಕ್ರಮಗಳು ಆರ್.ಪಿ.ಡಿ. ಕಾಲೇಜು ಎದುರು ಕೃಷ್ಣ ಮಂದಿರದಲ್ಲಿ ಜರುಗಲಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button