Karnataka NewsLatest

*ಬಿಜೆಪಿಯಿಂದ ಅವಹೇಳನಕಾರಿ ನಿಂದನೆ: ಮಹಿಳಾ ಆಯೊಗಕ್ಕೆ ದೂರು ನೀಡಿದ ಟಬು ರಾವ್*

ಪ್ರಗತಿವಾಹಿನಿ ಸುದ್ದಿ: ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಗೂ ಕೋಮು ನಿಂದನೆ ಮಾಡುತ್ತಿರುವ ಬಿಜೆಪಿ ಎಕ್ ಪೋಸ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ತಮ್ಮ ಹಾಗೂ ತಮ್ಮ ಸಮುದಾಯದ ವಿರುದ್ಧ ಬಿಜೆಪಿ ಎಕ್ಸ್ ಹ್ಯಾಂಡಲ್ ಗಳು ಕೆಟ್ಟದಾಗಿ , ಅವಹೇಳನಕಾರಿಯಾಗಿ ನಿಂದಿಸುತ್ತಿದ್ದಾರೆ. ಆರೋಗ್ಯ ಸಚಿವರ ಪತ್ನಿಯಾಗಿ ಅನಗತ್ಯ ವಾಗಿ ನನ್ನ ವಿರುದ್ಧ ದಾಳಿ ನಡೆಸಲಾಗುತ್ತಿದೆ. ನನ್ನ ವೈವಾಹಿಕ ಸಂಬಂಧ ಹಾಗೂ ಧರ್ಮವನ್ನು ಹಿನ್ನಲೆಯಾಗಿರಿಸಿಕೊಂಡು ನಿಂದಿಸಲಾಗುತ್ತಿದೆ. ಈ ಬಗ್ಗೆ ಬಿಜೆಪಿ ಎಕ್ಸ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Related Articles

ಈಗಾಗಲೇ ಅವಹೇಳನಕಾರಿ ಟೀಕೆ ಮಾಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ದುರಾದೃಷ್ಟವಶಾತ್ ಇದು ಬಿಜೆಪಿಯವರಿಗೆ ದಿನಚರಿಯಾಗಿಬಿಟ್ಟಿದೆ. ಬಿಜೆಪಿ ನಾಯಕರು ಹಾಗೂ ಅವರ ಸಾಮಾಜಿಕ ಜಾಲತಾಣಗಳು ನನ್ನ ಮೇಲೆ ನಿರಂತರ ದಾಳಿ ಮಾಡುತ್ತಲೇ ಇವೆ. ನಾನು ರಾಜಕೀಯದಲ್ಲಿ ಇಲ್ಲ. ಆದರೂ ನನ್ನ ವೈಯಕ್ತಿಕ ಜೀವನ ಹಾಗೂ ಸಮುದಾಯದ ಬಗ್ಗೆ ಟೀಕಿಸುವುದು, ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಕಿಡಿಕಾರಿದ್ದಾರೆ.

Home add -Advt

Related Articles

Back to top button