Kannada NewsKarnataka News

ವಿವಿಧೆಡೆ ದ್ವಿಚಕ್ರವಾಹನ ಕಳುವು; ಮೂಡಲಗಿ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳುವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ  9 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇದರಲ್ಲಿ ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ ಬೈಕ್ ಕೂಡ ಸೇರಿದೆ.

ಈ ಭಾಗದಲ್ಲಿ ಬೈಕ್ ಕಳುವಾದ ಬಗ್ಗೆ ದೂರುಗಳು ದಾಖಲಾಗಿದ್ದವು. ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು, ಉಪಾಧೀಕ್ಷಕರು ಹಾಗೂ ಮೂಡಲಗಿ ಪ್ರಭಾರ ಸಿಪಿಐ ಮಾರ್ಗದರ್ಶನದಲ್ಲಿ ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ   ಎಚ್.ವೈ. ಬಾಲದಂಡಿ ಅವರ ಅಪರಾಧ ವಿಭಾಗದ ಸಿಬ್ಬಂದಿ ಮತ್ತು ತನಿಖಾ ವಿಭಾಗದ ಸಿಬ್ಬಂದಿಯ ಒಂದು ತಂಡ ರಚಿಸಿ ತನಿಖೆ ಆರಂಭಿಸಿದಾಗ ಅನುಮಾನಾಸ್ಪದವಾಗಿ ದ್ವಿಕ್ರವಾಹನಗಳನ್ನು ಆರೋಪಿಗಳು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು  6 ತಿಂಗಳುಗಳಿಂದ ಮೂಡಲಗಿ, ಮಹಾಲಿಂಗಪುರ, ಹಾರೂಗೇರಿ, ಪಾಲಬಾವಿ, ಸೈದಾಪುರ ಮತ್ತು ಘಟಪ್ರಭಾ ಭಾಗಗಳಲ್ಲಿ  ಒಟ್ಟು 9 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅವರಿಂದ 5 .10 ಲಕ್ಷ ಮೌಲ್ಯದ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Home add -Advt

ಮೂರೂ ಜನ ಆರೋಪಿತರನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಚ್.ವೈ. ಬಾಲದಂಡಿ  ಸಿಬ್ಬಂದಿಗಳಾದ ಎಎಸ್‌ಐ ಎಂ.ಎಸ್. ಬಡಿಗೇರ, ಸಿಎಚ್ ಸಿ ಆರ್.ಎಸ್. ಪೂಜೇರಿ , ಸಿಪಿಸಿಗಳಾದ  ಎಸ್.ಜಿ. ಮನ್ನಾಪುರ  ಬಿ.ವೈ. ಮಾರಾಪುರ, ಪಿ.ವಿ. ಲೋಕೂರ  ಅವರ ಕಾರ್ಯವನ್ನು  ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಅತಿವೃಷ್ಟಿ: ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ಸರ್ಕಾರವಿದೆ: ಸಿಎಂ ಭರವಸೆ

Related Articles

Back to top button