Latest

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಸ್ಟಾರ್ ಗದ್ದಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಮುಗಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಹಳೆಯ ಕಾಂಗ್ರೆಸ್ಸಿಗರು, ಹೊಸ ಕಾಂಗ್ರೆಸ್ಸಿಗರು ಗದ್ದಲ ಈಗಿನ ಉಪಚುನಾವಣೆ ಹೊತ್ತಲ್ಲೂ ಮುಗಿದಿಲ್ಲ.

ಉಪಚುನಾವಣೆ ಹೊಸ್ತಿಲಲ್ಲಿ ಸ್ಟಾರ್ ಪ್ರಚಾರಕರ ನೇಮಕದ ವಿಷಯವಾಗಿ ಹಿರಿಯ ಕಾಂಗ್ರೆಸ್ಸಿಗ ಕೆ.ಎಚ್.ಮುನಿಯಪ್ಪ ತಕರಾರು ತೆಗೆದಿದ್ದಾರೆ. ಚುನಾವಣೆಗೆ ಕೇವಲ ಒಂದು ವಾರವಷ್ಟೆ ಇರುವಾಗ ಸ್ಟಾರ್ ಪ್ರಚಾರಕರ ಪಟ್ಟಿಗೆ ಇನ್ನೂ 12 ಜನರನ್ನು ಸೇರಿಸುವಂತೆ ಕೋರಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷ ಸ್ಟಾರ್ ಪ್ರಚಾರಕರೆಂದು 40 ಜನರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕೆ.ಎಚ್.ಮುನಿಯಪ್ಪ ಹೆಸರೂ ಇದೆ. ಆದರೆ ಇನ್ನೂ 12 ಜನರ ಹೆಸರನ್ನು ಸೇರಿಸುವಂತೆ ಮುನಿಯಪ್ಪ ಇದೀಗ ಪತ್ರಬರೆದಿದ್ದಾರೆ.

ಡಿ.ಕೆ.ಸುರೇಶ, ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ, ನಾಸೀರ್ ಹುಸೇನ್, ಎಲ್.ಹನುಮಂತಯ್ಯ, ಮೋಟಮ್ಮ, ಮುದ್ದಹನುಮೇಗೌಡ, ಎಚ್.ಆಂಜನೇಯ, ಬಿ.ಎನ್.ಚಂದ್ರಪ್ಪ, ಬಿ.ವಿ.ನಾಯಕ್, ರಾಣಿ ಸತೀಶ್, ಜಲಜಾ ನಾಯಕ ಹೆಸರನ್ನು ಸೇರಿಸಲು ಮುನಿಯಪ್ಪ ಸಲಹೆ ಮಾಡಿದ್ದಾರೆ.

Home add -Advt

ಪತ್ರದ ಪ್ರತಿಯನ್ನು ಕೆ.ಸಿ.ವೇಣುಗೋಪಾಲ ಅವರಿಗೂ ಕಳಿಸಿದ್ದಾರೆ.

ಯಾರಿದ್ದಾರೆ ಸ್ಟಾರ್ ಪಟ್ಟಿಯಲ್ಲಿ?

ಮೊದಲ ಪಟ್ಟಿಯಲ್ಲಿ ಕೆ.ಸಿ.ವೇಣುಗೋಪಾಲ, ದಿನೇಶ ಗುಂಡೂರಾವ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ, ಎಸ್.ಆರ್.ಪಾಟೀಲ, ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೋಯ್ಲಿ, ಡಿ.ಕೆ.ಶಿವಕುಮಾರ, ಎಚ್.ಕೆ.ಪಾಟೀಲ, ರಾಮಲಿಂಗಾ ರಡ್ಡಿ, ಸಿ.ಎಂ.ಇಬ್ರಾಹಿಂ, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಬಿ.ಝಡ್.ಜಮೀರ್ ಅಹ್ಮದ್, ಡಾ.ಜಯಮಾಲಾ, ರೆಹಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಎಚ್.ಎಮ್.ರೇವಣ್ಣ, ಉಮಾಶ್ರೀ, ಎಚ್.ಸಿ.ಮಹಾದೇವಪ್ಪ, ಆರ್.ಬಿ.ತಿಮ್ಮಾಪುರ, ಐವಾನ್ ಡಿಸೋಜಾ, ಎಸ್.ಎಲ್.ಘೋಟ್ನೇಕರ್, ಶಿವಶಂಕರ ರಡ್ಡಿ, ಯು.ಟಿಯಖಾದರ್, ಶಿವಾನಂದ ಪಾಟೀಲ, ಸಿ.ಪುಟ್ಟರಂಗ ಶೆಟ್ಟಿ, ತನ್ವೀರ್ ಸೇಠ್, ಬಸವರಾಜ ರಾಯರಡ್ಡಿ, ವಿ.ಎಸ್.ಉಗ್ರಪ್ಪ, ಕೆ.ಆರ್.ರಮೇಶಕುಮಾರ, ಆರ್.ದ್ರುವನಾರಾಯಣ, ನಾಸೀರ್ ಅಹ್ಮದ್, ಮಣಿಕ್ಕಂ ಟ್ಯಾಗೋರ್,  ಪಿ.ಸಿ.ವಿಷ್ಣುನಾದ್, ಸಾಖೇ ಸೈಲ್ಜಾನಾಥ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ವಿಶೇಷವೆಂದರೆ, ಎಷ್ಟೋ ಜನ ಅಡ್ರೆಸ್ಸೇ ಇಲ್ಲದವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿಲ್ಲ. ಆದರೆ ಅವರು ಸ್ಟಾರ್ ಪ್ರಚಾರಕರಿಗಿಂತ ಹೆಚ್ಚಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಧ್ಯಮಗಳಲ್ಲೂ ಎಲ್ಲರಿಗಿಂತ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

Related Articles

Back to top button