Latest

ಶಿಕ್ಷಕರ ನೇಮಕಾತಿ ಅಕ್ರಮ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಹಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ವಿಚಾರಣೆ ವೇಳೆ ಬಂಧಿತ ಆರೋಪಿ ಎಫ್ ಡಿಎ ಪ್ರಸಾದ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾನೆ.

ಸಹಶಿಕ್ಷಕರ ಅಕ್ರಮ ನೇಮಕಾತಿ ಕಿಂಗ್ ಪಿನ್ ಯಾರು? ಸೆಕೆಂಡ್ ಲಿಸ್ಟ್ ನಲ್ಲಿ ಅಕ್ರಮ ಅಭ್ಯರ್ಥಿಗಳನ್ನು ಸೇರಿಸಲು ಹೇಳಿದ್ಯಾರು? ಎಂಬ ಬಗ್ಗೆ ಬಾಯ್ಬಿಟ್ಟಿದ್ದು, ಎಂ.ಪಿ ಮಾದೇಗೌಡ ಹಾಗೂ ಗೀತಾ ಎಂಬುವವರ ವಿರುದ್ಧ ಪ್ರಸಾದ್ ಆರೋಪ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಾದೇಗೌಡ ಹಾಗೂ ಗೀತಾ ಎಂಬುವವರನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮಾದೇಗೌಡ ಹಾಗೂ ಗೀತಾ ಅಣತಿಯಂತೆ 12 ಅಕ್ರಮ ಶಿಕ್ಷಕರನ್ನು ಸೆಕೆಂಡ್ ಲಿಸ್ಟ್ ನಲ್ಲಿ ಸೇರಿಸಿರುವುದಾಗಿ ಪ್ರಸಾದ್ ಹೇಳಿದ್ದಾನೆ. ಅಭ್ಯರ್ಥಿಗಳ ಯಾವುದೇ ಡಾಕ್ಯುಮೆಂಟ್ ಪರಿಶೀಲನೆ ನಡೆಸದೇ ಡಿಡಿಪಿಐಗಳ ಸಹಿ ಹಾಕಿಸಲಾಗಿದೆ. ಅಧಿಕಾರಿಗಳು ತರಾತುರಿಯಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸಿದ್ದಾರೆ. ನೇಮಕಾತಿಗಾಗಿ ಒಬ್ಬೊಬ್ಬ ಶಿಕ್ಷಕರಿಂದ 15 ಲಕ್ಷ ಪಡೆಯಲಾಗಿತ್ತು. ಇದೇ ರೀತಿ ಪ್ರತಿ ಜಿಲ್ಲೆಯಲ್ಲಿಯೂ ಅಧಿಕಾರಿಗಳು ಅಕ್ರಮ ನಡೆಸಿದ್ದಾಗಿ ಪ್ರಸಾದ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಶಿಕ್ಷಕರ ನೇಮಕಾತಿ ಸೆಕೆಂಡ್ ಲಿಸ್ಟ್ ನ್ನು ಪಡೆದಿರುವ ಸಿಐಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

Home add -Advt

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

https://pragati.taskdun.com/local/an-acused-under-tirial-commited-suicide-hindalaga-jail-belagavi/

Related Articles

Back to top button