Latest

ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಮೇಲೆ ಗುಂಪು ಹಲ್ಲೆ

   ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ

ತಾಲೂಕಿನ ಸಂಕೇಶ್ವರ ಬಸ್ ನಿಲ್ದಾಣದ ಹತ್ತಿರ ಶುಕ್ರವಾರ ಮಂಜಾನೆ 11 ಗಂಟೆಗೆ ಓರ್ವ ವ್ಯಕ್ತಿಯ ಮೇಲೆ ಆರು ಜನರು ಹಲ್ಲೆ ಮಾಡಿದ್ದಾರೆ.
ಮಹಾರಾಷ್ಟ್ರ ಗಡಹಿಂಗ್ಲಜ್ ನಿವಾಸಿಯಾದ ಚೇತನ ಲಕ್ಕುಂಡಿ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಅವರು ಬಸ್ ನಿಲ್ದಾಣದ ಹತ್ತಿರ ಬೇರೆ ಊರಿಗೆ ತೆರಳಲು  ಕಾಯುತ್ತಿದ್ದ ಸಮಯದಲ್ಲಿ ಏಕಾ ಏಕಿ ಆರು ಜನ ಬಂದು ಮನ ಬಂದಂತೆ ಥಳಿಸಿದ್ದಾರೆ. ದೀಪಕ್ ಸನದಿ, ಓಂಕಾರ ಸನದಿ, ಕಿರಣ ಪಾಟೀಲ, ಸಚೀನ ಪೂಜೇರಿ, ಸಂತೋಷ ನಾವಿ, ಸಚೀನ ನಾವಿ ಎಂಬುವವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಘಟನೆ ಪರಿಣಾಮ ಬಸ್ ನಿಲ್ದಾಣದಲ್ಲಿ ಕೆಲ ಗಂಟೆಗಳ ಕಾಲ ಭಯದ ವಾತವಾರಣ ನಿರ್ಮಾಣವಾಗಿತ್ತು. ಇದನ್ನು ಕಂಡು ಸಾರ್ವಜನಿಕರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ನಂತರ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

Related Articles

Back to top button