Karnataka News

ಕಾಟದಿಂದ ಮುಕ್ತಿ ಕೊಡದಿದ್ದರೆ ಎಲ್ಲ ನಾಯಿಗಳನ್ನು ಪಾಲಿಕೆಗೆ ತಂದು ಬಿಡುತ್ತೇನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅವುಗಳಿಗೆ ಹದಿನೈದು ದಿನಗಳ ಒಳಗೆ ಸರಿಯಾದ ವ್ಯವಸ್ಥೆ ಮಾಡದಿದ್ದಲ್ಲಿ ಎಲ್ಲ ಬೀದಿ ನಾಯಿಗಳನ್ನು ತಂದು ಮಹಾನಗರ ಪಾಲಿಕೆ ಮುಂದೆ ಬಿಡುವುದಾಗಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಎಚ್ಚರಿಸಿದ್ದಾರೆ.

ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ  ಪಾಲಿಕೆಯ ನಾನಾ ಇಲಾಖೆಗಳ ಸಭೆ ಕರೆದಿದ್ದ ಅವರು,  ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು.

ನಾಯಿಗಳ ಸಂಖ್ಯೆ ವಿಪರೀತವಾಗಿದ್ದು ಪ್ರತಿ ಭಾನುವಾರ ತಾವು ಸೈಕಲ್ ನಲ್ಲಿ ಸುತ್ತುವ ಕಾರ್ಯಕ್ರಮದ ವೇಳೆ ಸಾರ್ವಜನಿಕರಿಂದ  ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಅವುಗಳ ಸಂತಾನ ನಿಯಂತ್ರಣ, ನಿರ್ವಹಣೆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಸಕಾಲ ಮತ್ತು ಸಮರ್ಪಕವಾಗಿ ಆಗುತ್ತಿರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು,  ಸರಿಯಾಗಿ ಕೆಲಸ ಮಾಡಲಾಗದವರು ಬೇರೆಡೆ ತೆರಳುವಂತೆ ಹೇಳಿದರಲ್ಲದೆ ಹೋಗದಿದ್ದಲ್ಲಿ ತಾವೇ ವರ್ಗಾವಣೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.

Home add -Advt

ನಗರದಲ್ಲಿ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಜನ ಈ ಬಗ್ಗೆ ದೂರುಗಳನ್ನು ಹೇಳಲು ಮುಂದಾದರೆ ನೀರು ಪೂರೈಕೆ ಗುತ್ತಿಗೆ ಪಡೆದವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಇನ್ನು ಮುಂದೆ ಹೀಗಾಗಕೂಡದು ಎಂದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ  ನಾನಾ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ನಗರಸೇವಕರು ಹಾಜರಿದ್ದರು. 

40 ದಿನ ಬೆಳಗಾವಿ, ಬಳ್ಳಾರಿ ಜೈಲಿನಲ್ಲಿದ್ದ ಏಕನಾಥ ಶಿಂಧೆ!

Related Articles

Back to top button