Election NewsKarnataka NewsLatestPolitics

*ಮೊದಲ ಸ್ಪರ್ಧೆಯಲ್ಲಿಯೇ ಶತಕ ಬಾರಿಸಿದ ಟಿವಿಕೆ ಪಕ್ಷ: ಸೂಪರ್‌ಸ್ಟಾರ್ ವಿಜಯ್ ಮುನ್ನಡೆ*

ಪ್ರಗತಿವಾಹಿನಿ ಸುದ್ದಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಎಲ್ಲಾ ಐದು ರಾಅಜ್ಯಗಳಲ್ಲಿಯೂ ಮತ ಎಣಿಕೆ ಬಿರುಸಿನಿಂದ ಸಾಗಿದೆ. ಈ ನಡುವೆ ತಮಿಳುನಾಡಿನಲ್ಲಿ ನೂತನ ಪಕ್ಷ ಟಿವಿಕೆ ಸಾಧನೆ ದೇಶದ ಜನರ ಗಮನಸೆಳೆಯುತ್ತಿದೆ.

ನಟ ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ಹೊಸ ಪಕ್ಷ ಟಿವಿಕೆ ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲ ಬಾರಿ ಸ್ಪರ್ಧೆಯಲ್ಲಿಯಲ್ಲಿಯೇ ನಟ ವಿಜಯ್ ಗೆಲುವಿನತ್ತ ಮುನ್ನುಗ್ಗಿದ್ದಾರೆ.

ಈ ಬಾರಿ ತಮಿಳುನಾಡಿನಲ್ಲಿ ವಿಜಯ್ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿಯೂ ಮುನ್ನಡೆ ಪಡೆದಿದ್ದಾರೆ, ಅಷ್ಟೇ ಅಲ್ಲ. ವಿಜಯ್ ಅವರ ಟಿವಿಕೆ ಪಕ್ಷ ಶತಕ ಬಾರಿಸಿದ್ದು, 113ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ತಮಿಳುನಾಡಿನಲ್ಲಿ ಟಿವಿಕೆ ಕಾರ್ಯಕರ್ತರು ಹಾಗೂ ವಿಜಯ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button