Belagavi NewsBelgaum NewsKannada NewsKarnataka NewsLatest

*ಚಿನ್ನದ ಪದಕ ಗೆದ್ದ ಬೆಳಗಾವಿ ಬಾಲಕ*

ದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ


ಪ್ರಗತಿವಾಹಿನಿ ಸುದ್ದಿ: ದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಸೇಂಟ್ ಪಾಲ್ಸ್ ಹೈಸ್ಕೂಲ್ ಕ್ಯಾಂಪ್ ಬೆಳಗಾವಿಯ ಸತೀಶ್ ಧನುಚೆ ಅವರ ಪುತ್ರ ಮಾಸ್ಟರ್ ಸ್ವರೂಪ್ ಧನುಚೆ 17 ವರ್ಷದೊಳಗಿನ ಬಾಲಕರ ವಿಭಾಗದ 200 ಮೀಟರ್ ಬಟರ್‌ಫ್ಲೈ ಸ್ವಿಮಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.

Home add -Advt

ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ ನ ನಟರಾಜ್ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್‌ನ ಸದಸ್ಯ ರಕ್ಷಿತ್ ಜಗದಾಳೆ, ಎನ್‌ಐಎಸ್ ತರಬೇತುದಾರ ವಿಶ್ವಾಸ್ ಪವಾರ್, ಬೆಳಗಾವಿಯ ಪ್ರಸಾದ್ ತಾಡೂಲ್ಕರ್ ಬೆಂಬಲದೊಂದಿಗೆ ಉತ್ತಮ ಸಾಧನೆ ಮಾಡಿದ್ದಾನೆ.

ಸೇಂಟ್ ಪಾಲ್ಸ್ ಹೈಸ್ಕೂಲ್ ಕ್ಯಾಂಪ್ ಬೆಳಗಾವಿಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ಬಾಲಕನ ಸಾಧನೆಗೆ ಅಭಿನಂದಿಸಿದ್ದಾರೆ. ಮಾಸ್ಟರ್ ಸ್ವರೂಪ್ ಧನುಚೆ 2022ರ ಖೇಲೋ ಇಂಡಿಯಾ ಯೋಜನೆಯಿಂದ ಆಯ್ಕೆಯಾದ ಬೆಳಗಾವಿಯ ಏಕೈಕ ಈಜುಪಟು ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.


Related Articles

Back to top button