Belagavi NewsBelgaum NewsKannada NewsKarnataka NewsLatestPolitics

*ನಾನೇನು ಫುಟ್ಬಾಲಾ? ಸ್ವಪಕ್ಷದ ವಿರುದ್ಧವೇ ಪ್ರಕಾಶ್ ಹುಕ್ಕೇರಿ ಗರಂ*

ಪ್ರಗತಿವಾಹಿನಿ ಸುದ್ದಿ: ಸ್ವಪಕ್ಷದ ನಾಯಕರ ವಿರುದ್ಧವೇ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂಬ ವಿಚಾರವಾಗಿ ನಾನೇನು ಫುಟ್ಬಾಲಾ? ಎಂದು ಗರಂ ಆಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಮಾತನಾಡಿದ ಪ್ರಕಾಶ್ ಹುಕ್ಕೇರಿ ನಾನೇನು ಫುಟ್ಬಾಲಾ? ಫುಟ್ಬಾಲ್ ಎಂದರೆ ಅರ್ಥ ಗೊತ್ತಲ್ವಾ? ಪ್ರತಿ ಬಾರಿ ಯಾವುದೇ ಚುನಾವಣೆ ಬಂದರೂ ಪ್ರಕಾಶ್ ಹುಕ್ಕೇರಿ ಎನ್ನುತ್ತಾರೆ. ಒಂದು ಸಾರಿ ಆ ಕಡೆ, ಇನ್ನೊಂದು ಸಾರಿ ಈ ಕಡೆ ಒದಿತಾರೆ. ನನ್ನನ್ನು ಶಿಕ್ಷಕ ಕ್ಷೇತ್ರದಿಂದ ಆಯ್ಕೆ ಮಾಡಿದ್ದು, 6 ವರ್ಷಗಳ ಕಾಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿ ಎಂದು. ಬರಿ ಚುನಾವಣೆಗೆ ನಿಲ್ಲಲಿ ಎಂದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Home add -Advt

ಲೋಕಸಭಾ ಚುನಾವಣೆಯಲ್ಲ ಸಧ್ಯಕ್ಕೆ ಯಾವ ಚುನಾವಣೆಗೂ ಸ್ಪರ್ಧಿಸಲ್ಲ ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ಸ್ಪರ್ದಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ಕಿಡಿಕಾರಿದ್ದಾರೆ.


Related Articles

Back to top button