Latest

ಮೂವರು ಉಪಮುಖ್ಯಮಂತ್ರಿ, ಬೊಮ್ಮಾಯಿಗೆ ಗೃಹ

ಮೂವರು ಉಪಮುಖ್ಯಮಂತ್ರಿ, ಬೊಮ್ಮಾಯಿಗೆ ಗೃಹ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಯಡಿಯೂರಪ್ಪ ಸಚಿವಸಂಪುಟದ ಖಾತೆಗಳ ಹಂಚಿಕೆ ಅಂತೂ ಪೂರ್ಣಗೊಂಡಿದೆ. ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸಲಾಗಿದೆ. ಬಸವರಾಜ ಬೊಮ್ಮಾಯಿಗೆ ಗೃಹ ಇಲಾಖೆ ನೀಡಲಾಗಿದೆ.

ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಾಗಿದೆ.

ಗೋವಿಂದ ಕಾರಜೋಳ ಅವರಿಗೆ ಲೋಕೋಪಯೋಗಿ ಹಾಗೂ ಸಮಾಜಕಲ್ಯಾಣ ಇಲಾಖೆ ನೀಡಲಾಗಿದೆ. ಅಶ್ವತ್ಥ ನಾರಾಯಣ ಅವರಿಗೆ ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ತಂತ್ರಜ್ಞಾನ ಇಲಾಖೆ ನೀಡಲಾಗಿದೆ. ಲಕ್ಷ್ಮಣ ಸವದಿಗೆ ಸಾರಿಗೆ ಇಲಾಖೆ ನೀಡಲಾಗಿದೆ.

Home add -Advt

ಇದನ್ನೂ ಓದಿ – ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ?

ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಇಲಾಖೆ, ಆರ್.ಅಶೋಕ ಅವರಿಗೆ ಕಂದಾಯ, ಜಗದೀಶ ಶೆಟ್ಟರ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಬಿ.ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸುರೇಶ ಕುಮಾರ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸೋಮಣ್ಣ ಅವರಿಗೆ ವಸತಿ ಇಲಾಖೆ ನೀಡಲಾಗಿದೆ.

ಸಿ.ಟಿ.ರವಿ ಅವರಿಗೆ ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ, ಬಸವರಾಜ ಬೊಮ್ಮಾಯಿಗೆ ಗೃಹ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು, ಮಧುಸ್ವಾಮಿಗೆ ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಇಲಾಖೆ, ಸಿ.ಸಿ.ಪಾಟೀಲ ಅವರಿಗೆ ಗಣಿ ಮತ್ತು ಭೂವಿಜ್ಞಾನ, ಎಚ್.ನಾಗೇಶ ಅವರಿಗೆ ಅಬಕಾರಿ, ಪ್ರಭು ಚವ್ಹಾಣ ಅವರಿಗೆ ಪಶು ಸಂಗೋಪನೆ, ಶಶಿಕಲಾ ಜೊಲ್ಲೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಲಾಗಿದೆ.

ಹಂಚಿಕೆಯಾಗದ ಖಾತೆಗಳನ್ನೆಲ್ಲ ಮುಖ್ಯಮಂತ್ರಿಗಳ ಬಳಿ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ – ಇಬ್ಬರಿಗೆ ಸಚಿವ ಸ್ಥಾನ: ತಣ್ಣಗಾಗುತ್ತಾ ಅಸಮಾಧಾನದ ಹೊಗೆ?

 

Related Articles

Back to top button