Latest

ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಪ್ರಗತಿವಾಹಿನಿ ಸುದ್ದಿ; ಹೊನ್ನಾವರ: ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಮನೆಯೊಂದರ ಬಾವಿಗೆ ಬಿದ್ದು ಮೇಲೆ ಬರಲಾರದೆ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.

ಬೇಟೆ ಅರಸುತ್ತ ಬಂದ ಚಿರತೆ ಕೆರೆಕೋಣದ ಸತ್ಯನಾರಾಯಣ ಭಂಡಾರಿ ಎಂಬುವವರ ಮನೆಯ ಅಂಗಳದ ಬಾವಿಗೆ ಬಿದ್ದಿತ್ತು. ಬಾವಿಯಿಂದ ಮೇಲೆ ಬರಲಾರದೆ ಚಿರತೆ ಒದ್ದಾಟ ನಡೆಸಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ‌.

ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ.

ಶಾಸಕ ಹರೀಶ್ ಪೂಂಜಾಗೆ ಬೆದರಿಕೆ ಕೇಸ್; CID ತನಿಖೆಗೆ ಆದೇಶ

Home add -Advt

https://pragati.taskdun.com/latest/mla-harish-poojathreat-casetransferred-cid/

Related Articles

Back to top button