Karnataka NewsLatestPolitics

*ರಾಜ್ಯದ 31 ಜಿಲ್ಲೆಗಳಿಗೆ ಹೊಸ ಉಸ್ತುವಾರಿ ಸಚಿವರ ನೇಮಕ*

ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ರಾಜ್ಯದ ಎಲ್ಲಾ 31 ಜಿಲ್ಲೆಗಳ ಅಭಿವೃದ್ಧಿ ಮತ್ತು ಆಡಳಿತ ಉಸ್ತುವಾರಿಗಾಗಿ ಉಪ ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ.

ಪ್ರಮುಖ ಜಿಲ್ಲೆಗಳ ಉಸ್ತುವಾರಿ ಯಾರಿಗೆ?

ಬೆಳಗಾವಿ ಜಿಲ್ಲೆ: ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಸಚಿವರು
ಬೆಂಗಳೂರು ನಗರ: ಕೃಷ್ಣ ಬೈರೇಗೌಡ – ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಚಿವರು
ಬೆಂಗಳೂರು ಗ್ರಾಮಾಂತರ: ಕೆ.ಎಚ್.ಮುನಿಯಪ್ಪ – ಸಮಾಜ ಕಲ್ಯಾಣ ಸಚಿವರು
ಬೆಂಗಳೂರು ದಕ್ಷಿಣ: ಹೆಚ್.ಸಿ. ಬಾಲಕೃಷ್ಣ – ಪೌರಾಡಳಿತ ಸಚಿವರು
ಮೈಸೂರು: ಡಾ: ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ ಸಚಿವರು
ಧಾರವಾಡ: ಸಂತೋಷ್ ಎಸ್ ಲಾಡ್ – ಕಾರ್ಮಿಕ ಮತ್ತು ಉದ್ಯೋಗ ಸಚಿವರು
ಕಲಬುರಗಿ: ಪ್ರಿಯಾಂಕ್ ಖರ್ಗೆ – ಗೃಹ ಮತ್ತು ಐಟಿಬಿಟಿ ಸಚಿವರು
ತುಮಕೂರು: ಡಾ: ಜಿ. ಪರಮೇಶ್ವರ – ಉಪ ಮುಖ್ಯಮಂತ್ರಿ ಮತ್ತು ಕಂದಾಯ, ಕ್ರೀಡಾ ಸಚಿವರು
ಬಾಗಲಕೋಟೆ: ವಿಜಯಾನಂದ ಕಾಶಪ್ಪನವರ್ – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರು
ಉತ್ತರ ಕನ್ನಡ: ಲಕ್ಷ್ಮಣ ಸಂಗಪ್ಪ ಸವದಿ – ಸಹಕಾರ ಸಚಿವರು

ಇತರೆ ಜಿಲ್ಲೆಗಳ ಪಟ್ಟಿ:
ವಿಜಯಪುರ: ಎಂ.ಬಿ. ಪಾಟೀಲ್
ಕೋಲಾರ: ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು: ಕೆ.ಜೆ. ಜಾರ್ಜ್
ದಕ್ಷಿಣ ಕನ್ನಡ: ಯು.ಟಿ.ಖಾದರ್
ಬೀದರ್: ಈಶ್ವರಖಂಡ್ರೆ
ಯಾದಗಿರಿ: ಡಾ: ಶರಣಪ್ರಕಾಶ್ ರುದ್ರಪ್ಪ ಪಾಟೀಲ್
ಗದಗ: ಬಸವರಾಜ ರಾಯರೆಡ್ಡಿ
ಮಂಡ್ಯ: ಎನ್. ಚಲುವರಾಯಸ್ವಾಮಿ
ಚಿಕ್ಕಬಳ್ಳಾಪುರ: ಸುರೇಶ್ ಬಿ.ಎಸ್.
ಕೊಪ್ಪಳ: ತಂಗಡಗಿ ಶಿವರಾಜ್ ಸಂಗಪ್ಪ
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ
ಚಾಮರಾಜನಗರ: ಸಿ. ಪುಟ್ಟರಂಗಶೆಟ್ಟಿ
ಶಿವಮೊಗ್ಗ: ಮಧು ಬಂಗಾರಪ್ಪ
ಹಾವೇರಿ: ರುದ್ರಪ್ಪ ಲಮಾಣಿ
ಬಳ್ಳಾರಿ: ಬಿ. ನಾಗೇಂದ್ರ
ಕೊಡಗು: ಪಿ.ಎಂ. ನರೇಂದ್ರಸ್ವಾಮಿ
ಹಾಸನ: ಕೆ.ಎಂ. ಶಿವಲಿಂಗೇಗೌಡ
ರಾಯಚೂರು: ಅಜಯ್ ಸಿಂಗ್
ಉಡುಪಿ: ರಿಜ್ವಾನ್ ಅರ್ಷದ್
ಚಿತ್ರದುರ್ಗ: ಟಿ. ರಘುಮೂರ್ತಿ
ವಿಜಯನಗರ: ಕೆ.ಎಸ್. ಬಸವಂತಪ್ಪ

ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಉಸ್ತುವಾರಿ ಸಚಿವರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button