Kannada NewsLatest

ಪಿಜಿಸಿಇಟಿ-ಕೆಮ್ಯಾಟ್ ಸಿದ್ಧತಾ ಶಿಬಿರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕರ್ನಾಟಕ ಕಾನೂನು ಸಂಸ್ಥೆಯ ಐಎಂಇಆರ್ ಜೂ.17 ರಿಂದ 22 ರವರೆಗೆ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ ಬರೆಯಲು ಆಸಕ್ತರಿಗಾಗಿ ಒಂದು ವಾರದ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.

ಎಂಬಿಎಗೆ ಪ್ರವೇಶ ಪಡೆಯಲು ಪಿಜಿಸಿಇಟಿ ಹಾಗೂ ಕೆಮ್ಯಾಟ್ ಪರೀಕ್ಷೆಗೆ ಹಾಜರಾಗುವುದು ಅತ್ಯಗತ್ಯ.
ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಲಾಜಿಕಲ್ ರೀಸನಿಂಗ್, ಕ್ವಾಂಟಿಟೇಟಿವ್ ಎನ್ಯಾಲಿಸಿಸ್, ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ ಮೊದಲಾದ ವಿಷಯಗಳ ಬಗ್ಗೆ ನುರಿತ ತಜ್ಞರು ಮಾಹಿತಿ ನೀಡುವರು.
ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ ನಡೆಸಿ, ಅವರು ಪಡೆದ ಅಂಕಗಳನ್ನು ಆಧರಿಸಿ, ಹಿಂದುಳಿದಿರುವ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು.
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ತಮಗಿಷ್ಟವಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಂತೆ ಮಾಡುವುದೇ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ತರಬೇತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ಇಂಟರ್‌ನೆಟ್, ಲೈಬ್ರರಿ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಸಹ ಮಾರ್ಗದರ್ಶನ ಮಾಡುವರು.
ಆಸಕ್ತ ವಿದ್ಯಾರ್ಥಿಗಳು ತರಬೇತಿ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಐಎಂಇಆರ್ ನಿರ್ದೇಶಕ ಡಾ. ಅತುಲ್ ದೇಶಪಾಂಡೆ ಕೋರಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಅರೀಫ್ ಶೇಖ್ ಮೊ. 9916044352 ಸಂಪರ್ಕಿಸಬಹುದು.

Home add -Advt

Related Articles

Back to top button