Karnataka NewsLatest

*ಇಸ್ತ್ರಿ ಪೆಟ್ಟಿಗೆಯಿಂದ ಪತ್ನಿಯ ಮುಖ, ಮೈ ಸುಟ್ಟು ವಿಕೃತಿ ಮೆರೆದ ಪತಿ*

ಪ್ರಗತಿವಾಹಿನಿ ಸುದ್ದಿ: ಅನುಮಾನದ ಭೂತಕ್ಕೆ ಪತಿ ಮಹಾಶಯನೊಬ್ಬ ಪತ್ನಿಯ ಮುಖ, ಮೈಯನ್ನು ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಇಲ್ಲಿನ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ನಾಗೇಶ್ ಎಂಬಾತ ಪತ್ನಿಯ ಮೇಲೆ ದೌರ್ಜನ್ಯವೆಸಗಿ ಚಿತ್ರ ಹಿಂಸೆ ನೀಡಿದ್ದಾನೆ.

ಪತ್ನಿ ಮೇಲಿನ ಅನುಮಾನಕ್ಕೆ ನಾಗೇಶ್ ಪತ್ನಿಯ ಮುಖ, ಕೈ, ಕಾಲು, ತೊಡೆಯ ಭಾಗಕ್ಕೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾನೆ. ಗಂಭೀರ ಸ್ಥಿತಿ ತಲುಪಿರುವ ಮಹಿಳೆಯನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗಸ್ಟ್ 15ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ಚೇತರಿಸಿಕೊಂಡಿರುವ ಮಹಿಳೆ ಬಳ್ಳಾರಿಯ ತವರು ಮನೆಯಲ್ಲಿದ್ದು, ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ್ ತಂದೆ ಚಂದ್ರಣ್ಣ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಂದೆ-ಮಗ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

Home add -Advt

Related Articles

Back to top button