Belagavi NewsBelgaum NewsKarnataka NewsLatest

*ಡಾ.ಪ್ರಭಾಕರ ಕೋರೆಯವರಿಂದ ಎಂಎಲ್‌ಐಆರ್‌ಸಿಗೆ 1934ರ ಫೋರ್ಡ್ ಮಾಡೆಲ್ ಕಾರು ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತಮ್ಮ ಮನೆಯಲ್ಲಿದ್ದ 1934 ಮಾಡೆಲ್ ಫೋರ್ಡ್ ಸಲೂನ್ ಕಾರನ್ನು ಬೆಳಗಾವಿಯ ಮರಾಠಾ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ)ಗೆ ಇತ್ತೀಚಿಗೆ ಹಸ್ತಾಂತರಿಸಿದರು.

Home add -Advt


ಆಕರ್ಷಕ ವಿನ್ಯಾಸ ಹೊಂದಿದ್ದ 1934ರ ಮಾಡೆಲ್ ಫೋರ್ಡ್ ಸಲೂನ್ ಕಾರ್ ಇಂಜಿನ್ ಕ್ಷಮತೆಯಿಂದ ಕೂಡಿ ಇಂದಿಗೂ ಕಾರ್ಯನಿರ್ವಹಿಸುತ್ತಿತ್ತು. ಕೋರೆಯವರ ಪ್ರೀತಿಯ ಪ್ರತೀಕವಾಗಿದ್ದ ಫೋರ್ಡ್ ಕಾರ್‌ನ್ನು ತಂದೆಯವರ ನೆನಪಿನ ಪ್ರತೀಕವಾಗಿ ಜತನದಿಂದ ಇಟ್ಟುಕೊಂಡಿದ್ದರು.


ಇತ್ತೀಚಿಗೆ ಈ ಕಾರನ್ನು ಎಂಎಲ್‌ಆರ್‌ಸಿಯ ಕಮಾಂಡೆಂಟ್ ಬೀಗ್ರೇಡಿಯರ್ ಜಾಯದೀಪ ಮುಖರ್ಜಿ ಅವರಿಗೆ ಡಾ.ಕೋರೆಯವರು ಹಸ್ತಾಂತರಿಸಿದರು. ಈ ಕುರಿತು ಮಾತನಾಡಿದ ಅವರು “ಇದೊಂದು ಅತ್ಯಂತ ಹಳೆಯ ಮಾದರಿಯ ಅಪರೂಪದ ಫೋರ್ಡ್ ಸಲೂನ್ ಕಾರ್‌ವಾಗಿದ್ದು, ನಮ್ಮ ಪಾರಂಪರಿಕ ರೆಜಿಮೆಂಟಲ್ ಸೆಂಟರ್‌ಗೆ ಡಾ.ಕೋರೆಯವರ ಅಮೂಲ್ಯವಾದ ಕೊಡುಗೆಯಾಗಿದೆ. ಈ ವಿಂಟೇಜ್ ಕಾರು ನಮ್ಮ ಎಂಎಲ್‌ಐಆರ್‌ಸಿ ಸಂಗ್ರಹಾಲಯಕ್ಕೆ ಸೇರ್ಪಡೆಯಾಗಲಿದೆ ಹಾಗೂ ಇದು ಡಾ.ಕೋರೆಯವರ ನೆನಪಿನ ಸಂಕೇತವಾಗಿ ಉಳಿಯಲಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಕರ್ನಲ್ ವಿಕೆಬಿ ಪಾಟೀಲ ಹಾಗೂ ಮರಾಠಾ ಲಘು ಪದಾತಿದಳದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Related Articles

Back to top button