Latest

*ವಿಮಾನ ನಿಲ್ದಾಣದಲ್ಲೇ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದ ಪೊಲೀಸರು*

ಪ್ರಗತಿವಾಹಿನಿ‌ ಸುದ್ದಿ: ಅಶ್ಲೀಲ ವಿಡಿಯೋಗಳ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶ ತೊರೆದಿದ್ದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಕಡೆಗೂ ಬೆಂಗಳೂರಿಗೆ ವಾಪಾಸ್ಸಾಗಿದ್ದು, ಮಧ್ಯರಾತ್ರಿ ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. 

Home add -Advt

ಜರ್ಮಿನಿಯ ಮ್ಯೂನಿಕ್ ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಗುರುವಾರ ಮಧ್ಯರಾತ್ರಿ ಆಗಮಿಸುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದರು. ಲುಕ್‌ ಔಟ್‌ ನೋಟಿಸ್‌ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಇಮ್ಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ನನ್ನು ವಶಕ್ಕ ಪಡೆದು ಎಸ್‌ ಐ ಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಕಳೆದ 35 ದಿನಗಳಿಂದ ವಿದೇಶದಲ್ಲಿ ಅಡಗಿ ಕೂತಿದ್ದ ಪ್ರಜ್ವಲ್‌ ಮೇ 31ಕ್ಕೆ ಎಸ್‌ಐಟಿ ವಿಚಾರಣೆಗೆ ಹಾಜರಾಗೋದಾಗಿ ವಿಡಿಯೋ ಬಿಡುಗಡೆ ಮಾಡಿದ್ದರು. ಇದೀಗ ರಾಜ್ಯಕ್ಕಾಗಮಿಸಿರುವ ಪ್ರಜ್ವಲ್ ಮುಂದಿನ ಕಾನೂನು ಪ್ರಕ್ರಿಯಯನ್ನು ಎದುರಿಸಬೇಕಾಗಿದೆ.

Related Articles

Back to top button