
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಒಪಿಎಸ್ ಜಾರಿಗೆ ಸಂಬಂಧಿಸಿದಂತೆ ಹೈಕಮಾಂಡ್ ಜತೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು. ನೌಕರರ ಜತೆ ತಾವಿದ್ದು ಈ ವಿಷಯದಲ್ಲಿ ಸುಳ್ಳು ಭರವಸೆ ನೀಡುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಒಪಿಎಸ್ ನೌಕರರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ಸತ್ಯಾಗ್ರಹಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಚುನಾಯಿತ ಜನಪ್ರತಿನಿಧಿಗಳು, ಸರಕಾರದ ಅಧಿಕಾರಿಗಳು ಜನಪರ ಕೆಲಸ ಮಾಡಿದಾಗ ಮಾಡಿದಾಗ ಮಾತ್ರ ಸಮಸ್ಯೆ ನಿವಾರಣೆ ಸಾಧ್ಯ. ಸರಕಾರಿ ನೌಕರರಿಗೆ ನ್ಯಾಯಯುತ ಸಂಬಳ, ಪಿಂಚಣಿ ದೊರೆಯಲೇಬೇಕಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಒಪಿಎಸ್ ನೀಡಲು ಸಾಧ್ಯವಿಲ್ಲ ಎಂದು ತಮ್ಮ ಅವಧಿಯಲ್ಲಿ ಹೇಳಿದ್ದು ನಿಜ, ಆದರೆ ಈಗ ಕಾಲ ಬದಲಾಗಿದ್ದು ಹಿಮಾಚಲ ಪ್ರದೇಶ, ಝಾರ್ಖಂಡ್, ಆಸ್ಸಾಂ ರಾಜ್ಯಗಳಲ್ಲಿ ಒಪಿಎಸ್ ಜಾರಿಗೊಳಿಸಲಾಗಿದೆ. ಅದರಂತೆ ಕರ್ನಾಟಕದಲ್ಲೂ ಜಾರಿ ಮಾಡಬಹುದಾಗಿದೆ ಎಂದರು.
ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಎನ್ ಪಿಎಸ್ ಜಾರಿಗೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ಹೋರಾಟದ ತೀವ್ರತೆ ಇರಲಿಲ್ಲ. 6ನೇ ವೇತನ ಆಯೋಗ ರಚಿಸಿ ಅದರ ವರದಿಯ ಶಿಫಾರಸುಗಳನ್ನು ಸರಕಾರಕ್ಕೆ ಹೊರೆಯಾಗಿದ್ದರೂ ಅದನ್ನು ಪರಿಗಣಿಸದೆ ಜಾರಿಗೊಳಿಸಲಾಗಿದೆ. ಎಂದು ಸಿದ್ದರಾಮಯ್ಯ ಹೇಳಿದರು.
https://pragati.taskdun.com/emphasize-human-values-kulsachiwe-k-t-shantala/
ತಂದೆ ಕಳೆದುಕೊಂಡ ವಿದ್ಯಾರ್ಥಿನಿ ಶಿಕ್ಷಣಕ್ಕೆ ಧನಸಹಾಯ
https://pragati.taskdun.com/funding-for-the-education-of-a-girl-student-who-has-lost-her-father/
“ಸರ್, ದಯಮಾಡಿ SDMC ಗಳನ್ನು ರದ್ದುಮಾಡಿ”; ಶಿಕ್ಷಣಾಧಿಕಾರಿಯದೆನ್ನಲಾದ ವಿಡಿಯೊ ವೈರಲ್
https://pragati.taskdun.com/sir-please-cancel-sdmcs-education-officers-video-goes-viral/