ತಮ್ಮನನ್ನೇ ಹೊಡೆದು ಬಾವಿಗೆಸೆದ ಅಣ್ಣ?

ಪ್ರಗತಿವಾಹಿನಿ ಸುದ್ದಿ, ಹೆಬ್ರಿ – ಅಣ್ಣನೊಬ್ಬ ತನ್ನ ತಮ್ಮನನ್ನು ಕೊಲೆ ಮಾಡಿ ಬಾವಿಗೆ ಎಸೆದ ಅನುಮಾನವಿದೆ ಎಂಬ ದೂರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಗ್ಗೆ ಕೊಲೆ ಮತ್ತೊಬ್ಬ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆಯ ನಿವಾಸಿ ರವಿರಾಜ ಸೆಟ್ಟಿಗಾರ ಎಂಬವರ ಮೃತದೇಹ ಮನೆಯ ಹತ್ತಿರದ ಬಾವಿಯಲ್ಲಿ ಜ.೧೩ರಂದು ಪತ್ತೆಯಾಗಿತ್ತು. ಮೃತದೇಹವನ್ನು ಬಾವಿಯಿಂದ ಮೇಲೆತ್ತಿದಾಗ ತಲೆಯ ಹಿಂಬದಿಯಲ್ಲಿ ರಕ್ತಗಾಯ ಆಗಿರುವುದು ಕಂಡು ಬಂದಿದ್ದರಿಂದ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ರವಿರಾಜರ ಇನ್ನೋರ್ವ ಸಹೋದರ ಜಯರಾಮ ಸೆಟ್ಟಿಗಾರ ಹೆಬ್ರಿ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ರವಿರಾಜರ ತಲೆಯ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯಧದಿಂದ ಹೊಡೆದ ಗಾಯ ಕಂಡುಬಂದಿದೆ. ಅಣ್ಣ ಶಂಕರನಾರಾಯಣ ಸೆಟ್ಟಿಗಾರ ಹಾಗೂ ರವಿರಾಜ್ ಸೆಟ್ಟಿಗಾರ್ ಕೌಟುಂಬಿಕ ವಿಚಾರದಲ್ಲಿ ಕಲಹವಿದ್ದು ಅದೇ ಕಾರಣಕ್ಕೆ ಶಂಕರನಾರಾಯಣ ಸೆಟ್ಟಿಗಾರ್, ತನ್ನ ತಮ್ಮ ರವಿರಾಜ ಸೆಟ್ಟಿಗಾರನನ್ನು ಕೊಲೆ ಮಾಡಿರುವ ಬಗ್ಗೆ ಸಂಶಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅನೈತಿಕ ಸಂಬಂಧದ ಅಪಪ್ರಚಾರ, ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ; ಧಾರುಣ ಘಟನೆ

Home add -Advt

Related Articles

Back to top button