Karnataka News

ಠಾಣೆಯಲ್ಲಿಯೇ ಇಸ್ಪೀಟ್ ಆಡುತ್ತ ಕುಳಿತ ಪೊಲೀಸರು: ಐವರು ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕವಾಗಿ ಜನರು ಇಸ್ಪೀಟ್ ಆಡಿದರೆ ದಾಳಿ ನಡೆಸಿ ಕೇಸ್ ಹಾಕಬೇಕಾಗಿದ್ದ ಪೊಲೀಸರೇ ಪೊಲೀಸ್ ಠಾಣೆ ಒಳಗೆ ಇಸ್ಪೀಟ್ ಆಡುತ್ತಾ ಕುಳಿತ ಘಟನೆ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಈ ಕುರುತ ವಿಡಿಯೋ ಭಾರಿ ವೈರಲ್ ಆಗುತ್ತಿದಂತೆ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಐವರು ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.

Home add -Advt

ವಾಡಿ ಪೊಲೀಸ್ ಠಾಣೆಯ ಮೊದಲ ಅಂತಸ್ತಿನಲ್ಲಿ ಖಾಕಿ ಬಟ್ಟೆಯಲ್ಲಿಯೇ ನಾಲ್ಕೈದು ಜನ ಪೊಲೀಸರು ಇಸ್ಪೀಟ್ ಆಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರ್ತವ್ಯ ಲೋಪ ಆರೋಪದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಐವರು ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.

ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಸ್ ಎಸ್ ಐ ಮಹಿಮೂಡ್ ಮಿಯಾ, ಹೆಡ್ ಕಾನ್ಸ್ ಟೇಬಲ್ ನಾಗರಾಜ್, ಸಾಯಿಬಣ್ಣ, ಇಮಾಮ್, ಪಿಸಿ ನಾಗಭೂಷಣ್ ಅಮಾನತುಗೊಂಡವರು.


Related Articles

Back to top button