
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ನೇಹಿತೆಯನ್ನು ಪಾರ್ಟಿಗೆ ಕರೆದ ಯುವಕನೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರಿನ ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿ ನಡೆದಿದೆ.
ಯುವಕ ತನ್ನ ಗೆಳತಿ ಛತ್ತೀಸ್ ಗಢ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಪಾರ್ಟಿಯಿದೆ ಎಂದು ಆಹ್ವಾನಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಆರೋಪಿ ತುಷಾರ್ ವಿರುದ್ಧ ಸಂತ್ರಸ್ತ ಯುವತಿ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.