Karnataka NewsLatest

ಅಮ್ಮಣಗಿ: ಟಿಪ್ಪರ್ ಹಾಯ್ದು 50ಕ್ಕೂ ಹೆಚ್ಚು ಕುರಿಗಳ ಮಾರಣಹೋಮ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ತಾಲೂಕಿನ ಅಮ್ಮಣಗಿಯಲ್ಲಿ ಖಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಯ್ದು 50ಕ್ಕೂ ಹೆಚ್ಚು ಕುರಿಗಳು ಗುರುವಾರ ಸಂಜೆ ಸಾಮೂಹಿಕ  ಸಾವು ಕಂಡಿವೆ.

ಅಮ್ಮಣಗಿ- ಮುಗಳಿ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಕೆಲವು ಕುರಿಗಳು ಅರೆಜೀವವಾಗಿ ನರಳುತ್ತಿದ್ದು ಇನ್ನಷ್ಟು ಗಂಭೀರ ಗಾಯಗೊಂಡಿವೆ. ಕುರಿಗಳ ಮೇಲೆ ಹಾಯ್ದ ಟಿಪ್ಪರ್ ಸ್ಥಳದಲ್ಲೇ ಮಗುಚಿ ಬಿದ್ದಿದೆ.

ಕುರಿಗಳ ಹಿಂಡು ಸಾಗುತ್ತಿದ್ದಾಗ ವಾಹನ ನಿಯಂತ್ರಣಕ್ಕೆ ಬಾರದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.  ಅಪಘಾತ ಸಂಭವಿಸುತ್ತಲೇ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Home add -Advt

ಸ್ಥಳೀಯರು ಕುರಿಗಳ ಸ್ಥಿತಿ ಕಂಡು ಮರುಗುತ್ತಿರುವ ದೃಶ್ಯ ಕಂಡುಬಂತು.

ಯುವತಿ ರುಂಡ ಕಡಿದು ಪೊಲೀಸ್ ಠಾಣೆಗೆ ತಂದ ಮಾಜಿ ಪ್ರೇಮಿ

Related Articles

Back to top button