
ಪ್ರಗತಿವಾಹಿನಿ ಸುದ್ದಿ, ವಿಜಯಪುರ – ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಲಬುರಗಿಯ ಐಶ್ವರ್ಯ ಎನ್ನುವ 23 ವರ್ಷದ ವಿದ್ಯಾರ್ಥಿನಿ ವಿವಿ ಆವರಣದಲ್ಲಿರುವ ವಸತಿ ನಿಲಯದಲ್ಲಿ ನೇಣುಹಾಕಿಕೊಂಡಿದ್ದಾಳೆ. ಎಂಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲು ಆಕೆ ವಿಜಯಪುರಕ್ಕೆ ಬಂದಿದ್ದಳು.
ಆದರೆ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.