Latest

ಮಾಲ್ ನಲ್ಲಿ ಗುಂಡಿನ ದಾಳಿ; ಮೂವರ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಇಂಡಿಯಾನಾ: ದುಷ್ಕರ್ಮಿಯೊಬ್ಬ ಮಾಲ್ ನ ಫುಡ್ ಕೋರ್ಟ್ ಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಅಮೆರಿಕಾದ ಇಂಡಿಯಾನದಲ್ಲಿ ನಡೆದಿದೆ.

ಗ್ರೀನ್ ವುಡ್ ಪಾರ್ಕ್ ಮಾಲ್ ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆಸಿದ ಬಂದೂಕುದಾರಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗ್ರೀನ್ ವುಡ್ ಮೇಯರ್ ತಿಳಿಸಿದ್ದಾರೆ.

Home add -Advt

ದುಷ್ಕರ್ಮಿಯ ಅಟ್ಟಹಾಸಕ್ಕೆ ಕಾರಣ ತಿಳಿದುಬಂದಿಲ್ಲ. ಮಾಲ್ ನ ಬಾತ್ ರೂಮ್ ಬಳಿ ಪೊಲೀಸರಿಗೆ ಅನುಮಾನಾಸ್ಪದ ಬ್ಯಾಗ್ ಕಂಡುಬಂದಿದ್ದು, ಫುಡ್ ಕೋರ್ಟ್ ಬಳಿಯಿದ್ದ ಬಾತ್ ರೂಮ್ ಪಕ್ಕದಲ್ಲಿ ಬ್ಯಾಕ್ ಪ್ಯಾಕ್ ಬ್ಯಾಗ್ ಇರಿಸಲಾಗಿತ್ತು. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಷ್ಕರ್ಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಈ ವಸ್ತುಗಳೆಲ್ಲ ಇಂದಿನಿಂದ ಗ್ರಾಹಕರಿಗೆ ದುಬಾರಿಯಾಗಲಿವೆ

Related Articles

Back to top button