Latest

ಬೇರೆಯವರೊಂದಿಗೆ ಮಲಗು ಎಂದ ಪತಿಯನ್ನೇ ಕೊಂದಳು; ಪೊಲೀಸ್ ಠಾಣೆಗೆ ಶರಣಾದಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಂಬಂಧಿಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಪತಿ ಕಿರುಕುಳಕ್ಕೆ ಬೇಸತ್ತ ಎರಡನೇ ಪತ್ನಿ ಪತಿಯನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬೆಂಗಳೂರಿನ ಹಾರೋಕ್ಯಾತನಹಳ್ಳಿಯಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ ನನ್ನು ಎರಡನೇ ಪತ್ನಿ ನೇತ್ರಾ ರಾಡ್ ನಿಂದ ಹೊಡೆದು ಸಾಯಿಸಿದ್ದು, ಬಳಿಕ ಮಾದನಾಯಕನಹಳ್ಳಿ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾಳೆ.

ಪತಿ ಸ್ವಾಮಿರಾಜ್, ಸಂಬಂಧಿಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿ ಹಿಂಸಿಸುತ್ತಿದ್ದ. ಈ ಕಾರಣಕ್ಕೆ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ಸ್ವಾಮಿರಾಜ್ ಎರಡನೇ ಪತ್ನಿ ಪೊಲೀಸರ ಎದುರು  ಹೇಳಿಕೆ ನೀಡಿದ್ದಾಳೆ

ಕಳೆದ 10 ವರ್ಷದಿಂದ ನೇತ್ರಾ ಮತ್ತು ಸ್ವಾಮಿರಾಜ್ ಜೊತೆಯಾಗಿ ಜೀವನ ಸಾಗಿಸುತ್ತಿದ್ದರು. ಎರಡು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Home add -Advt

ಸ್ವಾಮಿರಾಜ್ ಆಸ್ತಿಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತ ಸ್ವಾಮಿರಾಜ್ ಮೊದಲ ಪತ್ನಿ ಸತ್ಯಕುಮಾರಿ, ಎರಡನೇ ಪತ್ನಿ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸಾಂಬ್ರಾದಲ್ಲಿ ಮಕ್ಕಳಿಬ್ಬರ ದುರ್ಮರಣ; ಹಬ್ಬದ ಸಂಭ್ರಮದಲ್ಲೇ ದುರ್ವಿಧಿಯ ಅಟ್ಟಹಾಸ

Related Articles

Back to top button