Latest

ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ರೂ ದಂಡ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಂದಿ ಇನ್ಫಾಸ್ಟ್ರಕ್ಚರ್ ಕಾರಿಡಾರ್  (ನೈಸ್) ವಿರುದ್ಧ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನ್ಯಾಯಾಲಯ 2 ಕೋಟಿ ರೂ. ದಂಡ ವಿಧಿಸಿದೆ.

ನೈಸ್ ಕಂಪನಿಗೆ ಆದ ಮಾನನಷ್ಟಕ್ಕೆ 2 ಕೋಟಿ ರೂ. ನೀಡುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ ಆದೇಶಿಸಿದೆ.

Home add -Advt

ಖಾಸಗಿ ಟಿವಿ ಚಾನೆಲ್ ಒಂದಕ್ಕೆ ಸದರ್ಶನ ನೀಡುವಾಗ ದೇವೇಗೌಡ ನೈಸ್ ಕಂಪನಿ ವಿರುದ್ಧ ಆರೋಪ ಮಾಡಿದ್ದರು. ನೈಸ್ ಕಂಪನಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಡೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದ ದೇವೇಗೌಡ ನೈಸ್ ಕಂಪನಿಗೆ 2 ಕೋಟಿ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ದೇವೇಗೌಡ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾರೋ, ಪರಿಹಾರ ನೀಡುತ್ತಾರೋ ಕಾದು ನೋಡಬೇಕಿದೆ.

ತರಕಾರಿಗಳನ್ನು ಒದ್ದು ಅಮಾನವೀಯತೆ ತೋರಿದ್ದ ಪಿಎಸ್ಐ ಅಮಾನತು

Related Articles

Back to top button