Kannada NewsKarnataka NewsLatest

ಮೂಡಲಗಿ ತಾಲೂಕಿನಲ್ಲಿ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ

 ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿಯಿಂದ ಘಟಪ್ರಭಾ ನದಿಗೆ ಗುರುವಾರದಂದು ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೂಡಲಗಿ: ತಾಲೂಕಿನ ಢವಳೇಶ್ವರ ಸೇತುವೆ ಜಲಾವೃತ್ತಗೊಂಡಿರುವುದು.

ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆ ಮೈದುಂಬಿ ಸುರಿಯುತ್ತಿರುವ ಘಟಪ್ರಭೆ ನದಿ ಮೈದುಂಬಿ ಹರಿಯುತ್ತಿದ್ದು ಮೂಡಲಗಿ ತಾಲೂಕಿನ ಸುಣಧೋಳಿ, ಕಮದಿನ್ನಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅವರಾದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ ಸೇರಿ ೬ ಸೇತುವೆ ಜಲಾವೃತವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಗುರುವಾರದಂದು ತಾಲೂಕಿನ ಘಟಪ್ರಭೆ ನದಿಯ ಸುಣಧೋಳಿ ಸೇತುವೆ ಜಲಾವೃತ್ತಗೊಂಡು ಸುಣಧೋಳಿ-ಮೂಡಲಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು

ಸುಣಧೋಳಿಯಿಂದ ಮೂಡಲಗಿ ತಾಲೂಕಾ ಕೇಂದ್ರಕ್ಕೆ ಸಂಚಾರ ಸ್ಥಗಿತವಾಗಿ ಪ್ರಯಾನಣಿಕರ ಪರದಾಟ. ಜನಜೀವನ ಅಸ್ಥವ್ಯಸ್ತವಾಗಿ ಢವಳೇಶ್ವರ, ಅವರಾದಿ ಸೇತುವೆಗಳು ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರ ಸೇರಿದಂತೆ ಹಲವು ಗ್ರಾಮಗಳ ಸಂಚಾರ ಸ್ಥಗಿತಗೊಂಡಿದೆ.

ಮೂಡಲಗಿ ತಾಲೂಕಿನ ಘಟಪ್ರಭೆ ನದಿ ತೀರದ ಹುಣಶ್ಯಾಳ(ಪಿ.ಜಿ) ತಿಗಡಿ, ಮಸಗುಪ್ಪಿ. ಪಟಗುಂದಿ, ಕಮಲದಿನ್ನಿ, ಸುಣಧೋಳಿ, ಬೈರನಟ್ಟಿ, ಮುನ್ಯಾಳ, ಹುಣಶ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಹಾಗೂ ಇನ್ನೂ ಕೆಲವು ಗ್ರಾಮಗಳ ಪ್ರವಾಹ ಭೀತಿ ಎದುರಾಗಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

Home add -Advt

 

 

Related Articles

Back to top button