60 ಅಡಿಯ ಸೇತುವೆಯನ್ನೇ ಕದ್ದ ಕಳ್ಳರು : 8 ಜನ ಪೊಲೀಸರ ವಶಕ್ಕೆ

 ಪ್ರಗತಿ ವಾಹಿನಿ ಸುದ್ದಿ ಪಾಟ್ನಾ – 

ಚಿನ್ನ, ಬೆಳ್ಳಿ, ಒಡವೆ, ಹಣ, ಪಾತ್ರೆ ಪಗಡೆ ಹೀಗೆ ಕಳ್ಳರು ನಾನಾ ವಸ್ತುಗಳನ್ನು ಕದಿಯುವ ವಿಷಯ ಗೊತ್ತೇ ಇದೆ. ಆದರೆ ಬಿಹಾರದ ರೋಹ್ತಾಸ್‌ನಲ್ಲಿ ಕಳ್ಳರು ೬೦ ಅಡಿಯ ಸೇತುವೆಯನ್ನೇ ಕಳುವು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

Home add -Advt

ರೋಹ್ತಾಸ್‌ನಲ್ಲಿ ಬಳಕೆಯಾಗದ ಹಳೆಯ ಸೇತುವೆಯೊಂದು ಇತ್ತು. ಅದರಲ್ಲಿ ಅಪಾರ ಪ್ರಮಾಣದ ಕಬ್ಬಿಣದ ರಾಡ್‌ಗಳು, ತೊಲೆಗಳಿದ್ದವು. ಇತ್ತೀಚೆಗೆ ೮ ಜನ ಕಳ್ಳರ ತಂಡ ಎರಡು ದಿನಗಳ ಕಾರ್ಯಾಚರಣೆ ನಡೆಸಿ ಜೆಸಿಬಿ ಬಳಸಿ ಸೇತುವೆಯನ್ನೇ ಕದ್ದಿದ್ದರು. ಕಳ್ಳರ ತಂಡದಲ್ಲಿ ಓರ್ವ ಸಬ್ ಡಿವಿಷನಲ್ ಅಧಿಕಾರಿಯೂ ಶಾಮೀಲಾಗಿದ್ದಾನೆ.

ರೋಹ್ತಾಸ್ ಪೊಲೀಸರು ಅಧಿಕಾರಿ ಸೇರಿದಂತೆ ಎಲ್ಲ ೮ ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ೨೪೭ ಕಿಲೋ ಕಬ್ಬಿಣ, ಜೆಸಿಬಿ ಮತ್ತಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸದೆ ಸುಮಲತಾ ಬಿಜೆಪಿ ಸೇರ್ತಾರಾ? CM ಬೊಮ್ಮಾಯಿ ಜೊತೆ ಚರ್ಚಿಸಿದ್ದೇನು?

Related Articles

Back to top button