ನವರಸ ನಾಯಕ ಜಗ್ಗೇಶ್ ಗೆ ಹುಟ್ಟು ಹಬ್ಬದ ಸಂಭ್ರಮ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಇಂದು ಸ್ಯಾಂಡಲ್ ವುಡ್ ನವರಸ ನಾಯಕ ಜಗ್ಗೇಶ್ ಅವರಿಗೆ 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಹಿನ್ನಲೆಯಲ್ಲಿ ಜಗ್ಗೇಶ್ ಮಂತ್ರಾಲಯಕ್ಕೆ ತೆರಳಿದ್ದು, ಗುರು ರಾಯರ ಸನ್ನಿಧಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ.

ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಜಗ್ಗೇಶ್, ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಮಾನವ ನಿರ್ಮಿತ ವೈರಾಣು. ನಂಬರ್ ಒನ್ ಸ್ಥಾನಕ್ಕಾಗಿ ಅಮೆರಿಕ, ರಷ್ಯಾ ಹಾಗೂ ಚೀನಾ ನಡುವೆ ನಡೆದಿರುವ ಬಯೋಲಾಜಿಕಲ್ ವಾರ್. ಪ್ರಕೃತಿ ಆಗಾಗ ಇಂಥ ರೋಗಗಳಿಂದ ಮಾನವನಿಗೆ ಎಚ್ಚರಿಸುತ್ತದೆ. ಹಿಂದಿನ‌ ಶತಮಾನದಲ್ಲಿ ಪ್ಲೇಗ್ ಬಂದಿತ್ತು. ಈಗ ಕೊರೋನಾ ಬಂದಿದೆ. ಕೊರೋನಾ ಬಗ್ಗೆ ಭಯಬೇಡ, ಜಾಗೃತಿಯಿಂದ ಇರಿ ಎಂದರು.

Home add -Advt

ಇದೇ ವೇಳೆ ಇಂದು ಪುನೀತ್ ರಾಅಜ್ ಕುಮಾರ್ ಅವರಿಗೆ​ 45ನೇ ಜನ್ಮದಿನ. ಹೀಗಾಗಿ ಪುನೀತ್​ ರಾಜ್​ಕುಮಾರ್​ಗೂ ಅವರು ಶುಭಾಶಯ ಕೋರಿದ ಜಗ್ಗೇಶ್, ಈ ನಾಡಿನ ಹೆಸರಾಂತ ನಟ, ಹಿರಿಯರ ಮಗ ಪುನೀತ್​ಗೆ ಜನ್ಮದಿನದ ಶುಭಾಶಯ. ರಾಯರು ಪುನೀತ್​ಗೆ ಆರೋಗ್ಯ ನೀಡಲಿ,” ಎಂದರು.

Related Articles

Back to top button