Latest

ಭಾರತದ ಒಂದಿಂಚು ಭೂಮಿಯನ್ನು ಕೂಡ ಯಾರೂ ಆಕ್ರಮಿಸಲು ಸಾಧ್ಯವಿಲ್ಲ : ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿ, ಇಟ್ನಾಗರ: ಎಲ್ಲ ವಿರೋಧಾಭಾಸಗಳನ್ನು ಬದಿಗೊತ್ತಿ, ಅಮಿತ್ ಶಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಅರುಣಾಚಲ ಪ್ರದೇಶಕ್ಕೆ ಇದು ಹಾಲಿ ಕೇಂದ್ರ ಗೃಹ ಸಚಿವರೂಬ್ಬರ ಮೊದಲ ಭೇಟಿಯಾಗಿದೆ.  ಈ ಭೇಟಿಯು ಅನಪೇಕ್ಷಿತ ಶಕ್ತಿಗಳನ್ನು ಎದುರಿಸುವ ಸಶಸ್ತ್ರ ಕಾವಲು ಪಡೆಗಳಿಗೆ ಸ್ಥೈರ್ಯ ವರ್ಧಕವಾಗಿದೆ.  ಇದು ಶಾ ಅವರ ಮುಂದೆ ನಿಂತು ಮುನ್ನಡೆಸುವ ನಾಯಕತ್ವದ ಗುಣವನ್ನು ತೋರಿಸುತ್ತದೆ.

ಈ ಪ್ರದೇಶಕ್ಕೆ ಭೇಟಿ ನೀಡಲು ಇದಕ್ಕಿಂತ ಇನ್ನೊಂದು ಉತ್ತಮ ಸಮಯ ಇರಲಿಕ್ಕಿಲ್ಲ. ITBP ಸೈನಿಕರು ಅಚ್ಚರಿ ಪಡುವಂತೆ, ಸೂಕ್ಷ್ಮ ನಿಯಂತ್ರಣ ರೇಖೆಯಿಂದ (LAC) ಕೇವಲ 15 ಕಿಮೀ ದೂರದಲ್ಲಿರುವ ಈಶಾನ್ಯ ರಾಜ್ಯದ ಗುಡ್ಡಗಾಡು ಪ್ರದೇಶವಾದ ಕಿಬಿಥೂದಲ್ಲಿ ಶಾ ಸೈನಿಕರ ನಡುವೆ ಒಂದು ರಾತ್ರಿ ಕಳೆದರು. 

 ಭಾರತದ ಮೊದಲ ಗ್ರಾಮವಾದ ಕಿಬಿಥೂಗೆ ಗೃಹ ಮಂತ್ರಿಗಳು ಭರ್ಜರಿ ಉಡುಗೊರೆ ನೀಡಿದರು.  ಈ ಪ್ರದೇಶವು ಎಲ್ಲಾ ಅಂಶಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂಬ ಅಂಶವನ್ನು ಸಂಪೂರ್ಣವಾಗಿ ಅರಿತುಕೊಂಡ ಅವರು ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (ವಿವಿಪಿ) ಅಡಿಯಲ್ಲಿ ಆ ಪ್ರದೇಶದ ಅಭಿವೃದ್ಧಿಗೆ 4,800 ಕೋಟಿ ರೂ. ಅನುದಾನ ನೀಡಿದರು.

 ಕಳೆದ ಆರ್ಥಿಕ ವರ್ಷದಿಂದ ನಾಲ್ಕು ವರ್ಷಗಳವರೆಗೆ ರಸ್ತೆ ಸಂಪರ್ಕಕ್ಕಾಗಿ ಪ್ರತ್ಯೇಕವಾಗಿ 2,500 ಕೋಟಿ ರೂ. ಸೇರಿದಂತೆ, 4,800 ಕೋಟಿ ರೂ.ಗಳ ಕೇಂದ್ರ ಘಟಕಗಳೊಂದಿಗೆ ‘ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ’ ಅನ್ನು ಸರ್ಕಾರ ನಡೆಸುತ್ತಿದೆ.  ಈ ಯೋಜನೆ ಅಡಿಯಲ್ಲಿ, ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ಮತ್ತು  ಕೇಂದ್ರಾಡಳಿತ ಲಡಾಖ್‌  ರಾಜ್ಯಗಳಲ್ಲಿ ಉತ್ತರದ ಗಡಿಗೆ ಹೊಂದಿಕೊಂಡಿರುವ 19 ಜಿಲ್ಲೆಗಳ 46 ಬ್ಲಾಕ್‌ಗಳಲ್ಲಿ 2,967 ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗಾಗಿ ಗುರುತಿಸಲಾಗಿದೆ.  ಮೊದಲ ಹಂತದಲ್ಲಿ, 662 ಗ್ರಾಮಗಳನ್ನು ಆದ್ಯತೆಯ ವ್ಯಾಪ್ತಿಗೆ ಗುರುತಿಸಲಾಗಿದೆ, ಇದರಲ್ಲಿ ಅರುಣಾಚಲ ಪ್ರದೇಶದ 455 ಗ್ರಾಮಗಳು ಸೇರಿವೆ.

Home add -Advt

 ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್ ಮೂಲಕ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಲ ಪ್ರಯತ್ನಿಸುತ್ತಿದೆ.  ಮೊದಲನೆಯದಾಗಿ, ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ, ಪ್ರದೇಶದ ಯುವಕರು ಕೆಲಸಕ್ಕಾಗಿ ಇತರ ಸ್ಥಳಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಮತ್ತು ಎರಡನೆಯದಾಗಿ, ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಚೀನಾದ ಆಕ್ರಮಣಕ್ಕೆ ಸುಲಭವಾಗಿ ಪ್ರತೀಕಾರ ತೀರಿಸಲು ಭಾರತದ ಸೈನಿಕರಿಗೆ ಸಹಾಯ ಮಾಡುವುದು.  ಇವೆರಡೂ ಮಹತ್ವದ ಕಾರ್ಯತಂತ್ರಗಳಿಗೆ ಕೇಂದ್ರದಿಂದ ಪೂರ್ಣ ಪ್ರಮಾಣದ ಬೆಂಬಲದ ಅಗತ್ಯವಿದೆ.

ಇಂಡೋ ಟಿಬೆಟಿಯನ್ ಗಡಿ ಸೈನ್ಯದ(ITBP) ಸೈನಿಕರಯರೊಂದಿಗಿನ ಸಂವಾದದಲ್ಲಿ, ಶಾ ಅವರನ್ನು ಆಧುನಿಕ ಯುದ್ಧಸಾಮಗ್ರಿಗಳೊಂದಿಗೆ ಸಜ್ಜುಗೊಳಿಸುವುದಾಗಿ ಮತ್ತು ಅವರ ಕುಟುಂಬಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ನಾಲ್ಕನೇ ತಲೆಮಾರಿನ ಸಂಪರ್ಕವನ್ನು ಒದಗಿಸುವ ಭರವಸೆ ನೀಡಿದರು.

ಕಿಬಿಥೂ ಕಾರ್ಯಕ್ರಮದಲ್ಲಿ,  ಚೀನಾಕ್ಕೆ ಬಲವಾದ ಸಂದೇಶವನ್ನು ರವಾನಿಸಿದ ಶಾ, ಭಾರತವು ತನ್ನ ಭೂಪ್ರದೇಶದ ಒಂದು ಇಂಚು ಭೂಮಿಯನ್ನು ಕೂಡ ಅತಿಕ್ರಮಿಸಲು ಬಿಡುವುದಿಲ್ಲ ಎಂದು ಹೇಳಿದರು.  ಯಾರಾದರೂ ಹಾಗೆ ಅತಿಕ್ರಮಿಸಬಹುದಾದ ದಿನಗಳು ಹೋಗಿವೆ.  ನಿಜವಾದ ನಾಯಕನಂತೆ ಶಾ,  ಶೌರ್ಯ ಕಾರ್ಯಗಳ ಮೂಲಕ “ನಮ್ಮ ದೇಶದ ಗಡಿಯನ್ನು ಯಾರೂ ಮುಟ್ಟಲಾರರು” ಎಂದು ತೋರಿಸಿದ ಇಂಡೋ ಟಿಬೆಟಿಯನ್ ಗಡಿ ಸೈನ್ಯ ಮತ್ತು ಸೇನೆಗೆ ಸಂಪೂರ್ಣ ಶ್ರೇಯಸ್ಸು ನೀಡಿದರು.

ಹಾಗೇ ದಿಟವಾದ ರಾಜ ನೀತಿಜ್ಞನಂತೆ ಮಾತನಾಡುತ್ತಾ , “ಈಗ, ಸೂಜಿ ಮೊನೆಯಷ್ಟು  ಭೂಮಿಯನ್ನು ಸಹ ಅತಿಕ್ರಮಿಸಲಾಗುವುದಿಲ್ಲ.  ನಮ್ಮ ನೀತಿ ಸ್ಪಷ್ಟವಾಗಿದೆ.  ನಾವು ಎಲ್ಲರೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ ಆದರೆ ನಮ್ಮ ಒಂದು ಇಂಚು ಭೂಮಿಯನ್ನು ಅತಿಕ್ರಮಿಸಲು ಬಿಡುವುದಿಲ್ಲ.  “ರಾಷ್ಟ್ರವು ಚಿಂತಾ-ಮುಕ್ತವಾಗಿ ನಿದ್ರಿಸಲು” ಶ್ರಮಿಸುತ್ತಿರುವ ಐಟಿಬಿಪಿ ಯೋಧರನ್ನು ಅಪಾರವಾಗಿ ಶ್ಲಾಘಿಸಿದರು.  ಅಮಿತ್ ಶಾ ಅವರ ಸಂದೇಶ ನೆರೆಯ ದೇಶಕ್ಕೆ  ಸ್ಪಷ್ಟ ಮತ್ತು ದೃಢವಾಗಿತ್ತು.

https://pragati.taskdun.com/hundreds-of-activists-joined-bjp/
https://pragati.taskdun.com/belgaum-five-candidates-fixed-countdown-to-congress-3rd-list/
https://pragati.taskdun.com/lakshmana-savadi-left-for-bangalore-in-a-special-flight/

Related Articles

Back to top button