Belagavi NewsBelgaum NewsCrimeKannada NewsKarnataka NewsLatest

*ಬೆಳಗಾವಿ ಪೊಲೀಸರ ಸರ್ಚಿಂಗ್: ಆಯುಧ ಹೊಂದಿದ್ದ ಇಬ್ಬರ ಮೇಲೆ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಮೂವರು ಯುವಕರಿಗೆ ಚಾಕು ಇರತ ಆಗುತ್ತಿದ್ದಂತೆ “ಆ್ಯಂಟಿ ಸ್ಟಾಬಿಂಗ್ ಸ್ಕ್ವಾಡ್” ಮತ್ತೆ ಫುಲ್ ಆಕ್ಟಿವ್ ಆಗಿದೆ.‌

ಅನುಮಾನಸ್ಪದ ವ್ಯಕ್ತಿ ವಾಹನ ತಪಾಸಣೆ ನಡೆಸಿದ ಪೊಲೀಸರಿಗೆ ಇಬ್ಬರು ವ್ಯಕ್ತಿಗಳ ಬಳಿ ಆಯುಧ ಪತ್ತೆಯಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಆಯುಧ ಜಪ್ತಿ ಮಾಡಿದ್ದಾರೆ.

ಕಾಕತಿವೇಸ್ ನಲ್ಲಿ ಹಾಫ್ ಪ್ಯಾಂಟ್ ಜೇಬಿನಲ್ಲಿ ಹರಿತವಾದ ಚಾಕು ಇಟ್ಟುಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಹರಿತವಾದ ಚಾಕು ವಶಪಡಿಸಿಕೊಳ್ಳಲಾಗಿದೆ.
ಶಶಿಕಾಂತ ಅರಕೇರಿ (27) ಬಂಧಿತ ಆರೋಪಿ. 

ನಗರದ ಕೊನವಾಳ ಗಲ್ಲಿಯಲ್ಲಿ ಸ್ವಾಡ್ ತಂಡಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ಶಶಿಕಾಂತ ಹರಿತವಾದ ಚಾಕುವನ್ನು ತನ್ನ ಹಾಫ್ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನೊಂದು ಕಡೆ ನಗರದ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲವಾರ ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಣಬರ್ಗಿಯ ಜ್ಯೋತಿರ್ಲಿಂಗ್ ಗಲ್ಲಿಯಲ್ಲಿ ಅಮೋಲ ವಾಫೆ (30) ಬಂಧಿತ ಆರೋಪಿ. 

ಆರೋಪಿ ಕಬ್ಬಿಣದ ತಲವಾರ್ ಹಿಡಿದು ಜಳಪಳಿಸಿದ್ದು, ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ನಿಂತಿರುವ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ತಲ್ವಾರ್ ವಶಪಡಿಸಿಕೊಂಡಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button