Kannada NewsKarnataka News

ಅಂತರಾಷ್ಟ್ರೀಯ ಅರ್ಜುನ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ಥಳೀಯ ಬಿಲ್ಲವ ಸಂಘ ಹಾಗು ಶಿವಗಿರಿ ಸೊಸೈಟಿಯ ವತಿಯಿಂದ ರವಿವಾರ ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ಪಟು ಅರ್ಜುನ ಪ್ರಶಸ್ತಿ ವಿಜೇತರಾದ ಮಮತಾ ಪೂಜಾರಿ, ತೇಜಸ್ವಿನಿ ಬಾಯಿ ಯವರಿಗೆ ಸಂಘದ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಮತಾ ಪೂಜಾರಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಯುವಕ, ಯುವತಿಯರು ಕ್ರೀಡೆಯಲ್ಲಿ ಪಾಲ್ಗೊಳಬೇಕು. ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಲು ಪಾಲಕರು ಸಹಕಾರಿಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುನೀಲ್ ಪೂಜಾರಿ, ಉಪಾಧ್ಯಕ್ಷ ಸಂತೋಷ ಕೆ ಪೂಜಾರಿ, ಸೊಸೈಟಿಯ ನಿರ್ದೇಶಕ ಗಂಗಾಧರ ಎಮ್, ಪದ್ಮಾವತಿ ಪೂಜಾರಿ, ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ವಿಜಯ್ ಬಿ ಸಾಲಿಯಾನ್ ಹಾಗೂ ಬಿಲ್ಲವ ಕಾರ್ಯಕಾರಿ ಮಂಡಳಿ ಸದಸ್ಯರು, ಮಹಿಳಾಮಂಡಲ , ಸೇವಾದಳ ಯುವಘಟಕದ ಸದಸ್ಯರು ಹಾಗೂ ಸೊಸೈಟಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಚಂದ್ರ ಹೆಚ್ ಪೂಜಾರಿ ನಿರೂಪಿಸಿ, ವಂದಿಸಿದರು.

Related Articles

Back to top button