Kannada NewsKarnataka NewsNationalPolitics

ನೇಹಾ ಹೀರೆಮಠ ಮನೆಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣ ಅತ್ಯಂತ ಖಂಡನೀಯವಾಗಿದೆ.‌ ನೇಹಾ ಕೊಲೆಯಿಂದ ಮಾನವೀಯ ಮೌಲ್ಯಗಳಿಗೆ ಅಘಾತವಾಗಿದೆ.‌ ಈ ಘಟನೆಯನ್ನು ಖಂಡಿಸುತ್ತೇವೆ.‌ ಇಡೀ ದೇಶ ಅವರ ಕುಟುಂಬದ ಜೊತೆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಮಾತನಾಡಿರುವ ನಡ್ಡಾ ಅವರು, ಸಿಎಂ ಮತ್ತು ಗೃಹ ಸಚಿವರು ನೇಹಾ ಕೊಲೆ ಕೇಸ್ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ.‌ ಅವರ ಹೇಳಿಕೆ ಖಂಡಿನಿಯ.‌ ತುಷ್ಟಿಕರಣದ ಪರಮಾವಧಿ ಇದಾಗಿದೆ.‌  ಪ್ರಕಾರಣದ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ.‌ ಪ್ರಕರಣಕ್ಕೆ ಮುಸುಕು ಹಾಕುವ ಪ್ರಯತ್ನ ನಡೆದಿದೆ.‌ ಕರ್ನಾಟಕದ ಜನತೆ ಇದನ್ನು ಕ್ಷಮಿಸೋಲ್ಲ. ಪೊಲೀಸರು ಸೂಕ್ತ ತನಿಖೆ ಮಾಡಬೇಕು.‌ ರಾಜ್ಯ ಪೊಲೀಸರು ಅಸಮರ್ಥರಿದ್ದರೆ ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದರು.‌

ಈ ಪ್ರಕರಣವನ್ನು ಸಿಬಿಐಗೆ ರೆಫರ್ ಮಾಡಿದರೆ ನಾವು ಸೂಕ್ತ ತನಿಖೆ ಮಾಡಿಸ್ತೇವೆ.‌ ಅವರ ತಂದೆಗೂ ರಾಜ್ಯ ಪೋಲೀಸರ ಮೇಲೆ ನಂಬಿಕೆ ಹೋಗಿದೆ.‌ ಕೇಂದ್ರ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ ಎಂದು ನಡ್ಡಾ ಹೇಳಿದರು.‌

Home add -Advt

Related Articles

Back to top button