
ಪ್ರಗತಿವಾಹಿನಿ ಸುದ್ದಿ; ಮುಂಬೈ: ಹಲ್ಲು ಉಜ್ಜುತ್ತಾ ಯುವಕನೊಬ್ಬ ಟೂಥ್ ಬ್ರಶ್ ನ್ನೇ ನುಂಗಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.
ವಿಜಯ್ ಜನಾರ್ಧನ್ ಬ್ರಶ್ ನುಂಗಿದ ಯುವಕ. ಹಲ್ಲುಜ್ಜುವಾಗ ಯುವಕ ಏಕಾಕಿ ಬ್ರಶ್ ನುಂಗಿದ್ದಾನೆ. ಕೆಲ ಸಮಯದಲ್ಲಿ ತಡೆಯಲಾಗದಷ್ಟು ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾನೆ.
ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಟೂಥ್ ಬ್ರಶ್ ಇರುವುದು ಪತ್ತೆಯಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಟೂಥ್ ಬ್ರಶ್ ಹೊರತೆಗೆದಿದ್ದು, ಸದ್ಯ ಯುವಕ ಆರೋಗ್ಯದಿಂದಿದ್ದಾನೆ ಎಂದು ತಿಳಿದುಬಂದಿದೆ.