Belagavi NewsBelgaum NewsKannada NewsKarnataka NewsLatest

*ತಜ್ಞ ವೈದ್ಯಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ಹುದ್ದೆಗೆ ನೇರ ಸಂದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯ ತಾಲ್ಲೂಕಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯಾಧಿಕಾರಿಗಳ ಹಾಗೂ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ OBG-15, PEDIATRICS-08, ANSTHESIA- 18, GENRAL MEDICINE-05, GENRAL SERGEON-03, ENT-05 RADIOLOGIST -05, SKIN-05, SMO-07, СМО-16, GDMO-29, ನಮ್ಮ ಕ್ಲಿನಿಕ ವೈದ್ಯಾಧಿಕಾರಿಗಳು -14 ಹುದ್ದೆಗಳು ಖಾಲಿ ಇರುತ್ತವೆ.

ಆಸಕ್ತ ಎಂ.ಡಿ/ಎಂ.ಎಸ್/ಡಿಪ್ಲೋಮಾ ವಿದ್ಯಾರ್ಹತೆ ಮತ್ತು ಆಯಾ ಹುದ್ದೆಗೆ ತಜ್ಞತೆ ಹೊಂದಿದ ಹಾಗೂ ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಹೊಂದಿ ಕರ್ನಾಟಕ ಮೆಡಿಕಲ್ ಕೌನ್ಸಿಲ್ನಲ್ಲಿ ನೋಂದಣಿ ಹೊಂದಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು. ಕ ಇಲಾಖೆಯ ಕಚೇರಿ ಅಥವಾ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಎಲ್ಲ ಮೂಲ ದಾಖಲಾತಿಗಳೊಂದಿಗೆ ಕಚೇರಿ ವೇಳೆಯಲ್ಲಿ ಹಾಜರಾಗಬಹುದು. ಹುದ್ದೆ ಭರ್ತಿಯಾಗುವವರೆಗೆ ಸಂದರ್ಶನ ಪ್ರಕ್ರಿಯೇ ನಿರಂತರವಾಗಿರುತ್ತದೆ.

ಮಾರ್ಗಸೂಚಿಯಂತೆ ಆಯ್ಕೆಯಾದ ತಜ್ಞ ವೈದ್ಯಾಧಿಕಾರಿಗಳಿಗೆ ಮಾಸಿಕ ರೂ.1,10,000 ಹಾಗೂ ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳಿಗೆ ರೂ.60,000 ವೇತನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಮೊ.ಸಂಖ್ಯೆ: 9449843039 ಅಥವಾ ಬೆಳಗಾವಿ ಆರ್.ಸಿ.ಹೆಚ್ ಅಧಿಕಾರಿಗಳು ಮೊ.ಸಂಖ್ಯೆ:9449843184 ನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragativahini.com/dkshivakumarpm-modimeet

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button