Belagavi NewsBelgaum NewsKannada NewsKarnataka NewsNationalPolitics

ಮಾಜಿ ಶಾಸಕ ಸಂಜಯ ಪಾಟೀಲ್ ವಿವಾದಾತ್ಮಕ ಹೇಳಿಕೆ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಡಿಯೂರಪ್ಪ ಜೈಲಿಗೆ ಹೋದಾಗ ಸಿದ್ದರಾಮಯ್ಯ ರಾಕ್ ಡ್ಯಾನ್ಸ್ ಮಾಡಿದ್ದರು. ನೀ ಮಗನೆ ಸಗಣಿ ತಿಂದಿ, ಮೊದಲು ವಾಂತಿ ಮಾಡು ಅದನ್ನು ಎಂದು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್ ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.

ಗುರುವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ಆರೋಪಗಳ ಬಗ್ಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಇಷ್ಟು ದಿವಸ ಯಾಕೆ ನೆನಪು ಆಗಿರಲಿಲ್ಲ. ಯಾರೇ ತಪ್ಪು ಮಾಡಿದರು ಕ್ರಮಕೈಗೊಳ್ಳಲಿ. ಆದರೆ ಮೊದಲು ನೀನು ಸಗಣಿ ತಿಂದಿದೀಯಾ ಅದನ್ನ ವಾಂತಿ ಮಾಡು ಎಂದು ವಿವಾದಾತ್ಮಕ ಹೇಳಿಕೆ‌ ನೀಡಿದ್ದಾರೆ.

ಐವಾನ್ ಡಿಸೋಜ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಭೋಗಳುವರು ಕಚ್ಚುವದಿಲ್ಲ.‌ ಐವಾನ ಡಿಸೋಜ ಬರಿ ಭೋಗಳಬೇಕು. ಯಾರು ಕಳ್ಳ ಇದ್ದಾನೆ ಅವನೆ ಚಿರುತ್ತಿದ್ದಾನೆ ಯಾರು ಬೆಂಕಿ ಹಚ್ಚಿದ್ದಾರೆ ಅವನೆ ಬೆಂಕಿ ಹತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

Home add -Advt

Related Articles

Back to top button