Kannada NewsKarnataka NewsLatest

ಖಾನಾಪುರ ಬಿಇಒಗೆ ಕೊರೋನಾ: ಕಚೇರಿ ಸೀಲ್ ಡೌನ್ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕಚೇರಿಯನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.

ಶಿಕ್ಷಣಾಧಿಕಾರಿಯ ಪುತ್ರಿ ಮತ್ತು ಅವರ ವಾಹನ ಚಾಲಕನಿಗೂ ಕೊರೋನಾ ಪಾಸಿಟಿವ್ ಬಂದಿದೆ ಎಂದು ಗೊತ್ತಾಗಿದೆ.

Home add -Advt

ಕಚೇರಿಯನ್ನು ಸೆನಿಟೈಸ್  ಮಾಡಲಾಗಿದ್ದು, ಎಲ್ಲ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಹೊಮ್ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.

ಬಿಇಒ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದು, ತಾಲೂಕಿನ ಸಿಆರ್ ಪಿಗಳು, ಹಲವಾರು ಶಿಕ್ಷಕರು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಪ್ರಾಥಮಿಕ ಸಂಪರ್ಕ ಏರ್ಪಟ್ಟಿರುವ ಸಾಧ್ಯತೆ ಇದೆ.

 

Related Articles

Back to top button